ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ. ಶ್ರೀಕಾಂತ್ ಅವರಿಗೆ ಸಚಿವ ಎಸ್. ಮಧು ಬಂಗಾರಪ್ಪನವರಿಂದ ಅಭಿನಂದನೆ

ರಾಜ್ಯ ಶಿವಮೊಗ್ಗ

ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ. ಶ್ರೀಕಾಂತ್ ಅವರಿಗೆ ಸಚಿವ ಎಸ್. ಮಧು ಬಂಗಾರಪ್ಪನವರಿಂದ ಅಭಿನಂದನೆ

ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಸಮಾವೇಶ ಮತ್ತು ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಸಮಾಜಸೇವಕ ಹಾಗೂ ಕಾಂಗ್ರೆಸ್ ಮುಖಂಡರಾದ ಎಂ ಶ್ರೀಕಾಂತ್ ಅವರನ್ನು ಇತ್ತೀಚೆಗೆ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆ ಮಾಡಿದ ಹಿನ್ನೆಲೆಯಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು,

ಈ ಸಂದರ್ಭದಲ್ಲಿ ಎಂ ಎಲ್ ಸಿ ಬಲ್ಕೀಶ್ ಬಾನು, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಆರ್ ಪ್ರಸನ್ನ ಕುಮಾರ್, ಲೋಕಸಭೆಯ ಮಾಜಿ ಸದಸ್ಯ ಆಯನೂರು ಮಂಜುನಾಥ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್‌.ಎಂ. ಮಂಜುನಾಥಗೌಡ, ಉಪಾಧ್ಯಕ್ಷರಾದ ಎಸ್ ಕೆ ಮರಿಯಪ್ಪ, ಕಾಂಗ್ರೆಸ್ ಹಿಂದುಳಿದ ವರ್ಗಗಳ ನೂತನ ಜಿಲ್ಲಾಧ್ಯಕ್ಷರಾದ ರಮೇಶ್ ಶಂಕರಘಟ್ಟ, ರಾಜ್ಯ ಉಪಾಧ್ಯಕ್ಷರಾದ ಇಕ್ಕೇರಿ ರಮೇಶ್, ರಾಜ್ಯ ಸಂಚಾಲಕರಾದ ಜಿ.ಡಿ. ಮಂಜುನಾಥ್, ಹಾಗೂ ಕಾಂಗ್ರೆಸ್ ಪಕ್ಷದ ಪ್ರಮುಖರಾದ ಕಲಗೋಡು ರತ್ನಾಕರ್, ಡಾ. ಶ್ರೀನಿವಾಸ್ ಕರಿಯಣ್ಣ, ನಾಗರಾಜ್ ಕಂಕಾರಿ,ಎಚ್. ಪಾಲಾಕ್ಷಿ, ಎಸ್ ಪಿ ಶೇಷಾದ್ರಿ, ಆರ್ ಮೋಹನ್, ಉಮೇಶ್, ಸಂತೆ ಕಡೂರು ವಿಜಯಕುಮಾರ್, ವಿಶ್ವನಾಥ್ ಕಾಶಿ, ಡಾ. ಶರತ್ ಮರಿಯಪ್ಪ,ಬಸವರಾಜ್, ಕಲೀಮ್ ಪಾಷಾ, ಮಧುಸೂದನ್,ಜಿತೇಂದ್ರ, ವಿನಯ್ ತಾಂದ್ಲೆ, ವಿಜಯ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು..