22 ನೇ ವರ್ಷದ ಸಂಭ್ರಮದಲ್ಲಿ ವಂದನಾ ಬೇಕರಿ….
ಶಿವಮೊಗ್ಗಶಿವಮೊಗ್ಗದ ಸವಳಂಗ ರಸ್ತೆಯಲ್ಲಿರುವ ವಂದನ ಸ್ವೀಟ್ಸ್ ಮತ್ತು ಬೇಕರಿ
21ನೇ ಡಿಸೆಂಬರ್ 2003ರಲ್ಲಿ ಆರಂಭವಾದ ಬೇಕರಿಗೆ ಈಗ 22ರ ಸಂಭ್ರಮ…
* ಶಿವಮೊಗ್ಗ ಸೇರಿದಂತೆ ಉತ್ತರಕನ್ನಡ, ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ, ಉಡುಪಿ ಜಿಲ್ಲೆಗಳ ಜನರೂ ಸಹ ಈ ಬೇಕರಿಯ ಖಾಯಂ ಗ್ರಾಹಕರುಗಳಾಗಿದ್ದಾರೆ.
ಶಿವಮೊಗ್ಗ : ಸವಳಂಗ ರಸ್ತೆಯಲ್ಲಿ ರುವ ವಂದನ ಸ್ವೀಟ್ಸ್ ಮತ್ತು ಬೇಕರಿಮಲೆನಾಡಿನಾದ್ಯಂತ ಪ್ರಸಿದ್ದ ಬೇಕರಿಯಾಗಿದೆ. 2003ರ ಡಿಸೆಂಬರ್ 21ರಂದು ಆರಂಭವಾದ ಬೇಕರಿಗೆ ಈಗ 21ರ ಸಂಭ್ರಮ. ಸಂಕ್ರಾಂತಿ, ಯುಗಾದಿ, ಗೌರಿ-ಗಣೇಶ, ದಸರಾ, ದೀಪಾವಳಿ, ವರ್ಷದುದ್ದಕ್ಕೂ ಇಲ್ಲಿ ಸಿಹಿ ತಿಂಡಿಗಳಿಗೆ ಬೇಡಿಕೆ ಹೆಚ್ಚಿರುತ್ತದೆ. ಕ್ರಿಸ್‌ಮಸ್ ಹಬ್ಬ, ಹೊಸ ವರ್ಷ ಬಂತೆಂದರೆ ಬೇಕರಿಗೆ ಕಳೆ ಬರುತ್ತದೆ.
ಕೇಕ್ ಹಾಗೂ ಸಿಹಿ ತಿಂಡಿಗಳಿಗೆ ಜನ ಮುಗಿ ಬೀಳುತ್ತಾರೆ. ಇಲ್ಲಿ ವಿಭಿನ್ನ ರೀತಿಯ ರುಚಿಕರ ಕೇಕ್‌ಗಳು ಲಭ್ಯ, ಪೇಸ್ಟ್ರಿ, ಪ್ಲಮ್, ಇನ್ನೂ ಇತರೆ ಕೇಕ್‌ಗಳು ಕೈಗೆಟಕುವ ಬೆಲೆಯಲ್ಲಿ ಇಲ್ಲಿ ದೊರೆಯುತ್ತದೆ.
ಕ್ರಿಸ್ಮಸ್ ವಿಶೇಷವಾದ ರೋಸ್ ಕುಕ್ಕೀಸ್ ಸಹ ಇಲ್ಲಿ ದೊರೆಯುತ್ತದೆ.


