35 ಎಸೆತಗಳಲ್ಲೇ ದಾಖಲೆಯ ಶತಕ, IPL 2025: ಶತಕ ಸಿಡಿಸಿ ಗುರುವಿಗೆ Vaibhav Suryavanshi ಸೆಲ್ಯೂಟ್,

ಅಂತರ್ರಾಷ್ಟ್ರೀಯ ರಾಜ್ಯ ರಾಷ್ಟ್ರೀಯ

IPL 2025: ಶತಕ ಸಿಡಿಸಿ ಗುರುವಿಗೆ Vaibhav Suryavanshi ಸೆಲ್ಯೂಟ್,

ಸಿಡಿಲಬ್ಬರದ ಬ್ಯಾಟಿಂಗ್, 35 ಎಸೆತಗಳಲ್ಲಿ ಶತಕ, ಕ್ರಿಕೆಟ್ ಲೋಕದ ಹಲವು ದಾಖಲೆಗಳ ಧ್ವಂಸ ಮಾಡಿದ 14ರ ಪೋರ!…
ಜೈಪುರ: ಐಪಿಎಲ್ ಟೂರ್ನಿಯಲ್ಲಿ ಇಂದು ನಡೆದ ಗುಜರಾತ್ ಟೈಟನ್ಸ್ ಮತ್ತು ರಾಜಸ್ತಾನ ರಾಯಲ್ಸ್ ನಡುವಿನ ಪಂದ್ಯ ಭಾವುಕ ಕ್ಷಣಕ್ಕೆ ವೇದಿಕೆಯಾಯಿತ್ತು.
ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡ ನೀಡಿದ್ದ 210 ರನ್ ಗಳ ಗುರಿಯನ್ನು ರಾಜಸ್ತಾನ ರಾಯಲ್ಸ್ ತಂಡ ಕೇವಲ 15.5 ಓವರ್ ನಲ್ಲೇ 212 ರನ್ ಗಳಿಸಿ 8 ವಿಕೆಟ್ ಗಳ ಅಂತರದಲ್ಲಿ ಭರ್ಜರಿ ಜಯ ಗಳಿಸಿತು.
ರಾಜಸ್ತಾನ ಪರ ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್ ನಡೆಸಿ ಗುಜರಾತ್ ವಿರುದ್ಧದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು. ಜೈಸ್ವಾಲ್ 40 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 9 ಬೌಂಡರಿಗಳ ನೆರವಿನಿಂದ 70 ರನ್ ಸಿಡಿಸಿದರು.
ಮತ್ತೊಂದು ತುದಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ವೈಭವ್ ಸೂರ್ಯವಂಶಿ ಕೇವಲ 38 ಎಸೆತಗಳಲ್ಲಿ ಬರೊಬ್ಬರಿ 11 ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ 101 ರನ್ ಗಳಿಸಿದರು.
ಸಿಡಿಲಬ್ಬರದ ಬ್ಯಾಟಿಂಗ್, 35 ಎಸೆತಗಳಲ್ಲಿ ಶತಕ, ಕ್ರಿಕೆಟ್ ಲೋಕದ ಹಲವು ದಾಖಲೆಗಳ ಧ್ವಂಸ ಮಾಡಿದ 14ರ ಪೋರ!
ಶತಕ ಸಿಡಿಸುತ್ತಲೇ ಗುರುವಿಗೆ ಸೆಲ್ಯೂಟ್ ಮಾಡಿದ ವೈಭವ್ ಸೂರ್ಯವಂಶಿ
ಈ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ವೈಭವ್ ಸೂರ್ಯವಂಶಿ ಕೇವಲ 35 ಎಸೆತಗಳಲ್ಲೇ ದಾಖಲೆಯ ಶತಕ ಸಿಡಿಸಿದರು.
ಸಿಕ್ಸರ್ ಮೂಲಕ ಶತಕ ಸಿಡಿಸಿದ ವೈಭವ್ ರಾಜಸ್ತಾನ ಡಗೌಟ್ ನತ್ತ ತಿರುಗಿ ತನ್ನ ಗುರು ಹಾಗೂ ತಂಡದ ಕೋಚ್ ರಾಹುಲ್ ದ್ವಾವಿಡ್ ಗೆ ಬ್ಯಾಟ್ ಮೂಲಕ ಸೆಲ್ಯೂಟ್ ಮಾಡಿದರು.
ಈ ವೇಳೆ ಇಡೀ ಕ್ರೀಡಾಂಗಣ ಹರ್ಷೋದ್ಗಾರದಲ್ಲಿ ಮುಳುಗಿತ್ತು. ಕೇವಲ ರಾಜಸ್ತಾನ ಅಭಿಮಾನಿಗಳು ಅಷ್ಟೇ ಅಲ್ಲ ಮೈದಾನದಲ್ಲಿದ್ದ ಗುಜರಾತ್ ತಂಡದ ಅಭಿಮಾನಿಗಳೂ ಕೂಡ ಎದ್ದು ನಿಂತು ವೈಭವ್ ಸೂರ್ಯವಂಶಿಗೆ ಚಪ್ಪಾಳೆ ತಟ್ಟಿದರು.