ಪ್ರತಿಷ್ಠಿತ ಶಿವಮೊಗ್ಗ ಸಿಟಿ ಕೋ ಆಪರೇಟಿವ್ ಬ್ಯಾಂಕ್ ನ  ಅಧ್ಯಕ್ಷರಾಗಿ ಕೆ. ರಂಗನಾಥ್ ಆಯ್ಕೆ..

ರಾಜ್ಯ ಶಿವಮೊಗ್ಗ
ಪ್ರತಿಷ್ಠಿತ ಶಿವಮೊಗ್ಗ ಸಿಟಿ ಕೋ ಆಪರೇಟಿವ್ ಬ್ಯಾಂಕ್ ನ  ಅಧ್ಯಕ್ಷರಾಗಿ ಕೆ. ರಂಗನಾಥ್ ಅವಿರೋಧ ಆಯ್ಕೆ….
ಶಿವಮೊಗ್ಗ ನಗರದ 115 ವರ್ಷಗಳ ಇತಿಹಾಸವುಳ್ಳ ಪ್ರತಿಷ್ಠಿತ ಸಿಟಿ ಕೋ ಆಪರೇಟಿವ್ ಬ್ಯಾಂಕಿನ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕೆ. ರಂಗನಾಥ್ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷ ಸ್ಥಾನಕ್ಕೆ ಸಿ ಹೊನ್ನಪ್ಪ, ಖಜಾಂಚಿ ಸ್ಥಾನಕ್ಕೆ ಘನಶಾಮ್ ಆಯ್ಕೆಯಾಗಿದ್ದಾರೆ.
  ಈ ಚುನಾವಣೆಯಲ್ಲಿ ಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷರು ಹಿರಿಯ ಸಹಕಾರಿಯಾದ ಎಸ್ ಕೆ ಮರಿಯಪ್ಪನವರ ತಂಡದಿಂದ ಅಧ್ಯಕ್ಷ ಸ್ಥಾನಕ್ಕೆ ಯುವ ಸಹಕಾರಿ ಕೆ ರಂಗನಾಥ್ ಉಪಾಧ್ಯಕ್ಷ ಸ್ಥಾನಕ್ಕೆ ಸಿ ಹೊನ್ನಪ್ಪ, ಖಜಾಂಚಿ ಸ್ಥಾನಕ್ಕೆ ಘನಶಾಮ್ ರವರುಗಳು ಚುನಾವಣೆ ಅಧಿಕಾರಿಗಳಿಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು.
ಅಧ್ಯಕ್ಷರಾಗಿ ಆಯ್ಕೆಯಾದ ಕೆ. ರಂಗನಾಥ್ ಅವರಿಗೆ
ಸೂಡ ಸದಸ್ಯರು ಹಾಗೂ ಶಿವಮೊಗ್ಗ ಹೌಸಿಂಗ್ ಕೋ -ಆಪರೇಟಿವ್ ಸೊಸೈಟಿ ನಿರ್ದೇಶಕರಾದ ಎಂ.ಪ್ರವೀಣ್ ಕುಮಾರ್ ಮತ್ತು ಅವರ ಅಭಿಮಾನಿ ಬಳಗ ಶುಭ ಕೋರಿದೆ …