ಸಂಭ್ರಮದ ಬಕ್ರೀದ್ ಆಚರಣೆ

ರಾಜ್ಯ ಶಿವಮೊಗ್ಗ
ಸಂಭ್ರಮದ ಬಕ್ರೀದ್ ಆಚರಣೆ
ಶಿವಮೊಗ್ಗ: ತ್ಯಾಗ, ಬಲಿದಾನದ ಸಂಕೇತವೇ ಬಕ್ರಿದ್ ಹಬ್ಬವಾಗಿದ್ದು, ಶಿವಮೊಗ್ಗದಲ್ಲಿ ಬಕ್ರಿದ್ ಹಬ್ಬದ ಪ್ರಯುಕ್ತ ಜಿಲ್ಲಾಧಿಕಾರಿ ಕಚೇರಿ ಎದುರಿನ ಈದ್ ಮೈದಾನದಲ್ಲಿ ಮುಸ್ಲಿಮರು ಇಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು..
ಬಕ್ರಿದ್ ಹಬ್ಬ ಮುಸಲ್ಮಾನರಿಗೆ ಅತಿ ಶ್ರೇಷ್ಠವಾಗಿದೆ. 5000ಕ್ಕೂ ಹೆಚ್ಚು ಜನ ಈದ್ ಮೈದಾನದಲ್ಲಿ ಸೇರಿ ಪ್ರಾರ್ಥನೆ ಸಲ್ಲಿಸಿದರು. ನಗರದ ಹಲವು ಹಲವು ಈದ್ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆದಿದೆ.