ತೇವರ ಚಟ್ನಳ್ಳಿ ಸಮೀಪ ಎಸ್ಎಸ್ಎಂ ಲೇಔಟ್ ಸುತ್ತಮುತ್ತ ಹಂದಿಗಳ ಕಾಟ..
ಶಿವಮೊಗ್ಗ ನಗರದ ಹೊರ ವಲಯ, ಎಸ್ಎಸ್ಎಂ ಲೇಔಟ್ ತೇವರ ಚಟ್ನಳ್ಳಿ ಹೊನ್ನಳ್ಳಿ ರಸ್ತೆ ಫೇಸ್ ಕಾಲೇಜ್ ಹತ್ತಿರ ಶಿವಮೊಗ್ಗ ಇಲ್ಲಿ, ಹಂದಿ ಸಾಕುವವರು ಪ್ರತಿನಿತ್ಯ ಬಂದು ಹಂದಿಗಳನ್ನು ಬಿಟ್ಟು ಹೋಗುತ್ತಾರೆ. ಇದರಿಂದ ಇಲ್ಲಿ ವಾಸ ಮಾಡುವ ನಿವಾಸಿಗಳಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದ್ದು, ಒಂದು ವರ್ಷದಿಂದ ಮಹಾನಗರ ಪಾಲಿಕೆಗೆ ಸಾಕಷ್ಟು ಸಾರಿ ಮನವಿಗಳನ್ನು ಮಾಡಿದರು ಸಹ, ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಮಹಾನಗರ ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಾನಗರ ಪಾಲಿಕೆಯ ಅಧಿಕಾರಿ ಅವರನ್ನು ಸಂಪರ್ಕಿಸಿ ಇಲ್ಲಿಯ ಅವ್ಯವಸ್ಥೆಯ ಬಗ್ಗೆ ತಿಳಿಸಿದರು ಸಹ ಅವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
ಅನೇಕ ಸಲ ಹಂದಿಗಳ ವಿಡಿಯೋ ಫೋಟೋ ಗಳನ್ನು ಇವರಿಗೆ ಕಳಿಸಲಾಗಿದೆ. ದಯವಿಟ್ಟು ಹಂದಿ ಮಾಲೀಕರಿಗೆ ಮನವಿ ಮಾಡಿಕೊಳ್ಳಿ ಎಂಬುದನ್ನು ಸಹ ತಿಳಿಸಲಾಗಿದೆ. ಎಸ್ಎಸ್ಎಂ ಲೇಔಟ್ ನಲ್ಲಿ ಕಳೆದ ಮೂರು ವರ್ಷಗಳಿಂದ ಚರಂಡಿಯನ್ನು ಸಹ ಸ್ವಚ್ಛಗೊಳಿಸಿಲ್ಲ. ಯುಜಿಡಿ ಸಹ ತುಂಬಿ ಹರಿತಾ ಇದೆ ಇದರಿಂದ ನಾಗರಿಕರಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಮಹಾನಗರ ಪಾಲಿಕೆಯವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಯುಜಿಡಿ ತುಂಬಿ ಹರಿಯುತ್ತಿರುವುದರಿಂದ ಸಾಕಷ್ಟು ಸೊಳ್ಳೆಗಳು ಹೆಚ್ಚಾಗಿದ್ದು, ದಿನನಿತ್ಯ ಹಂದಿಗಳು ಅದರಲ್ಲಿ ಬಿದ್ದು ಒದ್ದಾಡಿ ರಸ್ತೆಯನ್ನು ಮತ್ತು ಮನೆಯ ಕಾಂಪೌಂಡ್ ಗಳನ್ನು ಗಲೀಜು ಮಾಡುತ್ತಿವೆ. ಚಿಕ್ಕ ಮಕ್ಕಳು ರಸ್ತೆಯಲ್ಲಿ ಓಡಾಡಲು ಭಯಪಡುತ್ತಿದ್ದಾರೆ ಎಂದು ನಿವಾಸಿಗಳು ದೂರಿದ್ದಾರೆ

