ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ, MBBS ವಿದ್ಯಾರ್ಥಿಗಳು ಸಾವು, ರಸ್ತೆ ಮೇಲೆ ಹರಿದ ಹಾಲು, ನೆತ್ತರು

ರಾಜ್ಯ ಶಿವಮೊಗ್ಗ
ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ, MBBS ವಿದ್ಯಾರ್ಥಿಗಳು ಸಾವು, ರಸ್ತೆ ಮೇಲೆ ಹರಿದ ಹಾಲು, ನೆತ್ತರು

 

ಶಿವಮೊಗ್ಗ: ನಗರದ ಸರ್ಕ್ಯೂಟ್‌ ಹೌಸ್‌ ಸರ್ಕಲ್‌ನಲ್ಲಿ ಬೆಳಗಿನ ಜಾವ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮೆಡಿಕಲ್‌ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೈಕ್‌ ಮತ್ತು ನಂದಿನಿ ಹಾಲಿನ ವಾಹನ ಮುಖಾಮುಖಿ ಡಿಕ್ಕಿಯಾಗಿವೆ.
ಮೂರನೇ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿಗಳಾದ ಆದಿತ್ಯ ಮತ್ತು ಸಂದೀಪ್‌ ಮೃತರು.
ರಸ್ತೆ ಮೇಲೆ ಹರಿದ ನೆತ್ತರು, ಹಾಲು..
ನಂದಿನಿ ಹಾಲಿನ ವಾಹನ ಮತ್ತು ಬೈಕ್‌ ಡಿಕ್ಕಿಯಾಗಿ ಆದಿತ್ಯ ಮತ್ತು ಸಂದೀಪ್‌ ಕೆಳಗೆ ಬಿದ್ದು ಗಾಯಗೊಂಡು, ತೀವ್ರ ರಕ್ತಸ್ರಾವ ಉಂಟಾಗಿದೆ. ರಸ್ತೆ ಮೇಲೆ ರಕ್ತ ಮಡುವಿನಲ್ಲಿ ಒಬ್ಬರ ಮೇಲೊಬ್ಬರು ಬಿದ್ದು ಸ್ಥಳದಲ್ಲೇ ಅಸುನೀಗಿದ್ದಾರೆ.
ಇನ್ನು ಹಾಲಿನ ವಾಹನದಲ್ಲಿದ್ದ ಹಾಲಿನ ಕ್ರೇಟ್‌ಗಳೆಲ್ಲ ಕೆಳಗೆ ಬಿದ್ದು ಪ್ಯಾಕೆಟ್‌ಗಳು ಒಡೆದು ಹಾಲು ರಸ್ತೆಯ ಮೇಲೆ ಹರಿದಿದೆ.
‍ಪಶ್ಚಿಮ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಯುವಕರ ಮೃತದೇಹಗಳನ್ನು ಮೆಗ್ಗಾನ್‌ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ಆದಿತ್ಯ ಉಡುಪಿ ಜಿಲ್ಲೆಯವನು. ಸಂದೀಪ್ ಹೊನ್ನಾಳಿಯನು ಎಂದು ಗೊತ್ತಾಗಿದೆ. ಇವರು ಹೆಲ್ಮೆಟ್ ಧರಿಸಿರಲಿಲ್ಲ.