ಮೊದಲ ಪೋಕ್ಸೋ ಕೇಸ್​​ನಲ್ಲಿ ಮುರುಘಾ ಶ್ರೀ ನಿರ್ದೋಷಿ ಎಂದ ಕೋರ್ಟ್: ಕೇಸ್​ನಿಂದ ಖುಲಾಸೆ

ರಾಜ್ಯ ರಾಷ್ಟ್ರೀಯ ಶಿವಮೊಗ್ಗ

ಮೊದಲ ಪೋಕ್ಸೋ ಕೇಸ್​​ನಲ್ಲಿ ಮುರುಘಾ ಶ್ರೀ ನಿರ್ದೋಷಿ ಎಂದ ಕೋರ್ಟ್: ಕೇಸ್​ನಿಂದ ಖುಲಾಸೆ

 

ಚಿತ್ರದುರ್ಗ: ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಮೊದಲ ಪೋಕ್ಸೋ(POCSO) ಪ್ರಕರಣದಲ್ಲಿ ಶಿವಮೂರ್ತಿ ಮುರುಘಾ ಶರಣರು ನಿರ್ದೋಷಿ ಎಂದಿರುವ ಚಿತ್ರದುರ್ಗದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕೇಸ್ ಖುಲಾಸೆಗೊಳಿಸಿದೆ.
ಪ್ರಕರಣವೇನು?:
ಮಠದ ಅಧೀನದಲ್ಲಿರುವ ವಸತಿ ಶಾಲೆಯಲ್ಲಿ ಅಧ್ಯಯನ ಮಾಡುತ್ತಿದ್ದ ಇಬ್ಬರು ಬಾಲಕಿಯರು ಮೈಸೂರಿನ ನಜರ್ಬಾದ್ ಪೊಲೀಸ್ ಠಾಣೆಯಲ್ಲಿ ಸ್ವಾಮೀಜಿ ಸೇರಿದಂತೆ ಐವರ ವಿರುದ್ಧ 2022ರ ಆಗಸ್ಟ್ 26ರಂದು ದೂರು ದಾಖಲಿಸಿದ್ದರು. ಆ ನಂತರ ಅದನ್ನು ವ್ಯಾಪ್ತಿಗೆ ಒಳಪಡುವ ಚಿತ್ರದುರ್ಗದ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿತ್ತು. ಶರಣರನ್ನು 2022ರ ಸೆಪ್ಟಂಬರ್ 1ರಂದು ಬಂಧಿಸಲಾಗಿತ್ತು.