ಥರ್ಮಾಕೋಲ್ನಲ್ಲಿ ಮೂಡಿಬಂದ ಅಯೋಧ್ಯೆಯ ಶ್ರೀರಾಮ ಮಂದಿರ…

ರಾಜ್ಯ ರಾಷ್ಟ್ರೀಯ ಶಿವಮೊಗ್ಗ

ಥರ್ಮಾಕೋಲ್ನಲ್ಲಿ ಮೂಡಿಬಂದ ಅಯೋಧ್ಯೆಯ ಶ್ರೀರಾಮ ಮಂದಿರ…

ಅಯೋಧ್ಯೆಯಲ್ಲಿ ನಿರ್ಮಾಣಗೊಂಡ ಶ್ರೀರಾಮ ಮಂದಿರದ ಒಂದು ವರ್ಷದ ಸವಿನೆನಪಿಗಾಗಿ ಎಂಎನ್‌ಸಿ ಸಾಫ್ಟ್ವೇರ್ ಕಂಪನಿಯ ಉದ್ಯೋಗಿ ಎಸ್. ಎನ್. ಸುಹಾಸ್ ಅವರು ಥರ್ಮಾಕೋಲ್ ನಲ್ಲಿ ನಿರ್ಮಿಸಿದ ಅಯೋಧ್ಯಯ ಶ್ರೀರಾಮ ಮಂದಿರ ಜನರ ಮೆಚ್ಚುಗೆಗೆ ಪಾತ್ರವಾಗಿದೆ,

 

                                                                                      

ಇವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದ ಶರಾವತಿ ನಗರ ಶಾಖೆಯ ಉದ್ಯೋಗಿ ನಾಗೇಂದ್ರ ಎಸ್.ಆರ್. ಅವರ ಪುತ್ರರಾಗಿದ್ದಾರೆ,

ನಾಗೇಂದ್ರ ಅವರು ಹವ್ಯಾಸಿ ಕಲಾವಿದರಾಗಿದ್ದು ಇವರು ಕೂಡ ಅನೇಕ ಕಲಾ ಕೃತಿಗಳನ್ನು ಮಾಡುವ ಮೂಲಕ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ…

 

ಇವರ ಪ್ರಮುಖ ಕಲಾಕೃತಿಗಳಾದ ಶೃಂಗೇರಿಯ ಮಠ, ಚಿತ್ರದುರ್ಗದ ಕೋಟೆ, ಬೆಂಗಳೂರಿನ ಹೈಕೋರ್ಟ್, ಶಿವಮೊಗ್ಗದ ಸೇಕ್ರೆಟ್ ಹಾರ್ಟ್ ಚರ್ಚ್ ಸೇರಿದಂತೆ ಅನೇಕ ಕಲಾಕೃತಿಗಳನ್ನು ನಾಗೇಂದ್ರ ರವರು ರಚಿಸಿದ್ದಾರೆ..