ಮಾ.2: ಮಧುಬಂಗಾರಪ್ಪ ಸಂಭ್ರಮದ ಹುಟ್ಟುಹಬ್ಬ: ಬಂಗಾರಪ್ಪ ಒಡನಾಡಿಗಳಿಗೆ ವಿಮಾನಯಾನ: ಜಿ.ಡಿ ಮಂಜುನಾಥ್

ಮಾ. 2ರ ಬೆಳಗ್ಗೆ 8 ಗಂಟೆಗೆ ರಾಮಣ್ಣ ಶ್ರೇಷ್ಠಿ ಪಾರ್ಕ್ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಂತರ 11 ಗಂಟೆಗೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅವರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುವುದು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಸೇರಿದಂತೆ ಪಕ್ಷದ ಮುಖಂಡರು, ವಿವಿಧ ಘಟಕಗಳ
ಅಧ್ಯಕ್ಷರು, ಪದಾಧಿಕಾರಿಗಳು, ಅಭಿಮಾನಿಗಳು, ಕಾರ್ಯತ್ರರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಟಿ. ಹಾಲಪ್ಪ ಅವರು ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಬಂಗಾರಪ್ಪ ಒಡನಾಡಿಗಳಿಗೆ ವಿಮಾನಯಾನ ಭಾಗ್ಯ: ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಸಂಯೋಜಕ ಜಿ.ಡಿ. ಮಂಜುನಾಥ್ ಮಾತನಾಡಿ, ಮಧು ಬಂಗಾರಪ್ಪ ಅವರು ಹುಟ್ಟುಹಬ್ಬದ ನೆನಪಿನಲ್ಲಿ ಈ ಬಾರಿ ವಿಶೇಷ ಕಾರ್ಯಕ್ರಮವೊಂದನ್ನು ರೂಪಿಸಿದ್ದಾರೆ. ತಮ್ಮ ಹುಟ್ಟೂರಿನ ಸುತ್ತಮುತ್ತಲ ಗ್ರಾಮದಲ್ಲಿರುವ ತಂದೆ ಬಂಗಾರಪ್ಪ ನವರ ಸಮಕಾಲೀನರು ಹಾಗೂ ಸ್ನೇಹಿತರಾದ 35 ಜನರನ್ನು ಶಿವಮೊಗ್ಗದಿಂದ ವಿಮಾನದಲ್ಲಿ ಬೆಂಗಳೂರಿಗೆ ಕರೆದೊಯ್ದು ಅಲ್ಲಿಯ ಬಂಗಾರಪ್ಪನವರ ಒಡನಾಡಿ ಗಳೊಂದಿಗೆ ಸೇರಿ ಹುಟ್ಟುಹಬ್ಬ ಆಚರಿಸಲಿದ್ದಾರೆ ಎಂದರು.



ಇದೊಂದು ಕೃತಜ್ಞಾಪೂರ್ವಕ ವಾದ ವಿಶೇಷ ಕಾರ್ಯಕ್ರಮ ವಾಗಿದ್ದು, ಅತ್ಯಂತ ಜನಾನುರಾಗಿ ಯಾಗಿದ್ದ ಬಂಗಾರಪ್ಪ ಅವರ ಒಡನಾಡಿಗಳನ್ನು ವಿಮಾನದ ಮೂಲಕ ಬೆಂಗಳೂರಿಗೆ ಕರೆದುಕೊಂಡು ಹೋಗಿ ಅಲ್ಲಿ
ಅವರಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಿ ಅರ್ಥಪೂರ್ಣವಾಗಿ ಮಧು ಬಂಗಾರಪ್ಪನವರು ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಅಂದು ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗದ ವಿಮಾನ ನಿಲ್ದಾಣದಿಂದ ಇವರೆಲ್ಲ ಪ್ರಯಾಣ ಬೆಳೆಸಲಿದ್ದಾರೆ ಎಂದರು. ಅಂದು ಬೆಳಗ್ಗೆ 9 ಗಂಟೆಗೆ ಸೊರಬದ ಬಂಗಾರ ಧಾಮದಲ್ಲಿ ಮಧು ಬಂಗಾರಪ್ಪ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸಲಿದ್ದಾರೆ. 10.30ಕ್ಕೆ ಮಧು ಬಂಗಾರಪ್ಪ ಅವರು ಸಾಗರದ ಕಾಗೋಡು ತಿಮ್ಮಪ್ಪ ಅವರ ಮನೆಗೆ ಹೋಗಿ ಆಶೀರ್ವಾದ ಪಡೆಯಲಿದ್ದಾರೆ ಎಂದರು.
ಪ್ರಮುಖರಾದ ಕಲೀಂ ಪಾಷಾ, ಯು. ಶಿವಾನಂದ್, ಇಕ್ಕೇರಿ ರಮೇಶ್, ಶಿವಣ್ಣ, ಯಮುನಾ ರಂಗೇಗೌಡ, ಮಂಜುನಾಥಬಾಬು, ಕೆಳಾನಾರ್ತಿ ಚಂದ್ರಕಲಾ, ಉಪಸ್ಥಿತರಿದ್ದರು.
