ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಅನ್ನಸಂತರ್ಪಣೆ , ಜ್ಯೂಸ್ , ಕೇಕ್ ವಿತರಣೆ

ರಾಜ್ಯ ಶಿವಮೊಗ್ಗ
ಕರ್ನಾಟಕದ ಕಣ್ಮಣಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮ ದಿನದ ಅಂಗವಾಗಿ ಪವಾರ್ ಸ್ಟಾರ್ ಪುನೀತ್
ರಾಜಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಶಿವಮೊಗ್ಗದ ಮಲ್ಲಿಕಾರ್ಜುನ ಚಿತ್ರ ಮಂದಿರದ ಮುಂಭಾಗ ಅನ್ನಸಂತರ್ಪಣೆ , ಜ್ಯೂಸ್ , ಕೇಕ್ ವಿತರಣೆ ಕಾರ್ಯಕ್ರಮ ..
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಯುವ ಮುಖಂಡ ಕೆ.ಈ . ಕಾಂತೇಶ್ ಕೇಕ್ ಕಟ್ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು , ಅಪ್ಪು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ , ಸಾರ್ವಜನಿಕರಿಗೆ ಅನ್ನಸಂತರ್ಪಣೆ ಮಾಡಿದರು , ಪವಾರ್ ಸ್ಟಾರ್ ಪುನೀತ್ ಅಭಿಮಾನಿಗಳ ಕಾರ್ಯಕ್ಕೆ ಮೆಚ್ಚುಗೆ ವೆಕ್ತಪಡಿಸಿದರು .

ಪವಾರ್ ಸ್ಟಾರ್ ಪುನೀತ್ ಅಭಿಮಾನಿಗಳ ಸಂಘದ ಜಿಲ್ಲಾದ್ಯಕ್ಷ ಮಧುಸುಧನ್ ಎಸ್.ಎಂ ಮಾತನಾಡಿ ಪುನೀತ್ ರಾಜಕುಮಾರ್ ಅವರ ಜನ್ಮ ದಿನವನ್ನು ಸ್ಪೂರ್ತಿ ದಿನವನ್ನಾಗಿ ಆಚರಿಸಬೇಕು ಎಂದು ಆಗ್ರಹಿಸಿದರು , ಬಿಜೆಪಿ ಸರ್ಕಾರವಿದ್ದಾಗ ಈ ಘೋಷಣೆ ಮಾಡಿದ್ದರು ಆದರೆ ಅನುಷ್ಠಾನ ವಾಗಲಿಲ್ಲ , ಈಗಿನ ಕಾಂಗ್ರೆಸ್ ಸರ್ಕಾರವಾದರೂ ಅನುಷ್ಠಾನ ಮಾಡುವ ಮೂಲಕ ಯುವಕರ ಸ್ಪೂರ್ತಿ ಪುನೀತ್ ರಾಜಕುಮಾರ್ ಅವರಿಗೆ ಗೌರವ ಸಲ್ಲಿಸಬೇಕೆಂದು ಮನವಿ ಮಾಡಿದರು,
ಜಿಲ್ಲಾ ಉಪಾಧ್ಯಕ್ಷರಾದ ಧನರಾಜ್, ಮಹೇಶ್ , ದರ್ಶನ್,ಶಿವಾನಂದ್ , ಪ್ರಶಾಂತ್ , ಪುಟ್ಟರಾಜ್ , ಶಿವರಾಜ್ , ಗೋವಿಂದಪುರದ ಕುಮಾರ್ ಸೇರಿದಂತೆ ನೂರಾರು ಸಂಖ್ಯೆಯ ಅಭಿಮಾನಿಗಳು ಹಾಜರಿದ್ದರು .