(ಜನಪರ ವಾಣಿ)
ಕರ್ನಾಟಕ ರಾಜ್ಯದ ವಿವಿಧ ಜೈಲುಗಳಲ್ಲಿ ವಾರ್ಡನ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ಕಾರ್ಯ ನಿರ್ವಹಿಸಲು, ಪೊಲೀಸ್ ಇಲಾಖೆ ಆಸಕ್ತ ಮಾಜಿ ಸೈನಿಕರಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಅರ್ಜಿ ಪ್ರಕ್ರಿಯೆ:
ಶಿವಮೊಗ್ಗ, ದಾವಣಗೆರೆ, ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ಸಂಬಂಧಿಸಿದ ಮಾಜಿ ಸೈನಿಕರು ತಮ್ಮ ಇಚ್ಚೆಯನ್ನು ದಿನಾಂಕ 25-11-2024 ರಂದು ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 1:00 ಗಂಟೆಯೊಳಗೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಕಚೇರಿಗೆ ಕರೆ ಮಾಡಿ (08182-220925) ಮಾಹಿತಿ ನೀಡಬಹುದು.
ಖಾಲಿ ಹುದ್ದೆಗಳ ವಿವರ:
- ಶಿವಮೊಗ್ಗ: 30
- ದಾವಣಗೆರೆ: 5
- ಚಿತ್ರದುರ್ಗ: 4
ಪ್ರಮುಖ ಮಾಹಿತಿ:
- ಗುತ್ತಿಗೆ ಅವಧಿ: 1 ವರ್ಷ (ಅವಶ್ಯಕತೆ ಆಧಾರದ ಮೇಲೆ ವಿಸ್ತರಣೆಯ ಅವಕಾಶ)
- ಕರ್ತವ್ಯದ ಅವಧಿ: 8 ಗಂಟೆಗಳ ಮೂರು ಶಿಫ್ಟ್ಗಳಲ್ಲಿ
- ವೇತನ: ₹28,499
ಆಸಕ್ತ ಅಭ್ಯರ್ಥಿಗಳ ಪಟ್ಟಿಯನ್ನು ದಿನಾಂಕ 25-11-2024ರ ಒಳಗೆ ಈ ಇಲಾಖೆಯ ನಿರ್ದೇಶನಾಲಯಕ್ಕೆ ಸಲ್ಲಿಸಲಾಗಬೇಕಿರುವುದರಿಂದ, ಅರ್ಜಿಯನ್ನು ತ್ವರಿತವಾಗಿ ಸಲ್ಲಿಸುವುದು ಅಗತ್ಯ.
ಮಾಹಿತಿ: ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ
