ಆಕ್ಸ್ಫರ್ಡ್ ಲರ್ನಿಂಗ್ ಸೆಂಟರ್ ಉದ್ಘಾಟನೆ..
ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹಾಗೂ ಕೌಶಲ್ಯ ವೃದ್ಧಿಸುವ ಆಕ್ಸ್ಫರ್ಡ್ ಕಲಿಕಾ ಕೇಂದ್ರವನ್ನು ಮಂಗಳವಾರ ಸರ್ವೋತ್ತಮ ರಾಜ್ಯ ಪ್ರಶಸ್ತಿ ವಿಜೇತರಾದ ಚಿಕ್ಕಮಂಗಳೂರಿನ ವಿಭಾಗ ಶಿಕ್ಷಣಾಧಿಕಾರಿ ನಾಗರಾಜ್. ಪಿ ಅವರು ಉದ್ಘಾಟಿಸಿ ಮಾತನಾಡಿದರು..
ಶಿಕ್ಷಣ ಕ್ಷೇತ್ರದಲ್ಲಿ ಸ್ಪರ್ಧಾತ್ಮಕ ಬದಲಾವಣೆ ಕಂಡಿದ್ದು, ಪಠ್ಯ ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧಗೊಳ್ಳುವ ಅನಿವಾರ್ಯತೆ ಮತ್ತು ಅಗತ್ಯ ಹೆಚ್ಚಿದೆ ಎಂದು ಅಭಿಪ್ರಾಯ ಪಟ್ಟರು,
ಈ ನಿಟ್ಟಿನಲ್ಲಿ ಅಕ್ಸ್ಫರ್ಡ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರು ಉತ್ತಮ ಕಾರ್ಯ ಚಟುವಟಿಕೆ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು..
ಆಕ್ಸ್ಫರ್ಡ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಶ್ರೀನಿವಾಸ್ ಡಿ.ಆರ್. ಮಾತನಾಡಿ ಈ ಕಲಿಕಾ ಕೇಂದ್ರದಲ್ಲಿ ಹೊಸ ಹೊಸ ಆಲೋಚನಾ ಕ್ರಮದಲ್ಲಿ ಕಲಿಕಾ ಸಾಮರ್ಥ್ಯ ವೃದ್ಧಿಸುವ ಕಾರ್ಯವನ್ನು ನಿರಂತರವಾಗಿ ಮಾಡುವ ಗುರಿಯನ್ನು ಒಂದಾಗಿದ್ದು ಈ ನಿಟ್ಟಿನಲ್ಲಿ ಪೋಷಕರ ಹಾಗೂ ಸಂಪನ್ಮೂಲ ವ್ಯಕ್ತಿಗಳ ಸಲಹೆ, ಸಹಕಾರ ಅಗತ್ಯ ಎಂದರು,
ಈ ಕಲಿಕಾ ಕೇಂದ್ರವು ಶಾಲೆಯ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗದೆ, ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ಎಲ್ಲಾ ಪರೀಕ್ಷಾರ್ಥಿಗಳಿಗೂ ಉತ್ತಮ ಕಲಿಕಾ ವೇದಿಕೆಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಅಮೃತ ಶ್ರೀನಿವಾಸ್, ಮತ್ತು ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಗಳು, ಪೋಷಕರು ಉಪಸ್ಥಿತರಿದ್ದರು

