ಶಿವಮೊಗ್ಗ : ಪ್ರಗತಿಪರ ಕೃಷಿಕ ಮಹೇಶ್ ಹೆಗ್ಡೆ ಅವರಿಗೆ ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ’ ಪ್ರಶಸ್ತಿ
ಕೃಷಿ ಕ್ಷೇತ್ರದ ಆಸ್ಕರ್ ಎಂದೇ ಪ್ರಸಿದ್ದಿ ಪಡೆದಿರುವ ಕೃಷಿ ಜಾಗರಣ್ ಸಂಸ್ಥೆ ನೀಡುವ ‘ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ’ ಪ್ರಶಸ್ತಿಗೆ ಶಿವಮೊಗ್ಗದ ರೈತ ಮಹೇಶ್ ಹೆಗ್ಡೆ ಭಾಜನರಾಗಿದ್ದಾರೆ. ದೇಶಾದ್ಯಂತ ಕೃಷಿ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದವರನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಈಚೆಗೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು.

