ನವಚೇತನ ಹಾಗೂ ದಿವ್ಯ ವಿದ್ಯಾಸಂಸ್ಥೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ 2025

ರಾಜ್ಯ ಶಿವಮೊಗ್ಗ
  • ನವಚೇತನ ಹಾಗೂ ದಿವ್ಯ ವಿದ್ಯಾಸಂಸ್ಥೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ 2025
ಭದ್ರಾವತಿ:- ಕಡದಕಟ್ಟೆಯ ನವಚೇತನ ಹಾಗೂ ದಿವ್ಯ ವಿದ್ಯಾಸಂಸ್ಥೆಯಲ್ಲಿ ಫೆ.17 ರಂದು 2025 ರ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.
ಸಂಸ್ಥೆಯ ಕಾರ್ಯದರ್ಶಿಗಳಾದ ಎಸ್.ವಿವೇಕ್ ರವರು ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಕ್ಕಳು ತಯಾರಿಸಿದ ಹನಿ ನೀರಾವರಿ ಪದ್ಧತಿ,ಸೌರಮಂಡಲ, ರೋಬರ್ಟ್,ನೀರಿನ ಶುದ್ಧೀಕರಣದ ಹಂತಗಳು,ಪವನ ಶಕ್ತಿ,ಮಳೆ ಕೊಯ್ಲು,ಪರಿಸರ ಸ್ನೇಹಿ ನಗರ, ಸ್ವಚ್ಛ ಗ್ರಾಮ,ಭೂಕಂಪ ಸೂಚಕ ಯಂತ್ರ,ಮುಂತಾದ ಮಾದರಿಗಳು ಎಲ್ಲಾರ ಮನ ಸೆಳೆದವು.
ಅತ್ಯುತ್ತಮವಾಗಿ ವಿಜ್ಞಾನ ಮಾದರಿ ತಯಾರಿಸಿದ ವಿದ್ಯಾರ್ಥಿಗಳಿಗೆ ಸಂಸ್ಥೆಯಿಂದ ಬಹುಮಾನ
ಘೋಷಿಸಲಾಯಿತು.ಮಾದರಿ ತಯಾರಿಸಲು ಸೂಕ್ತ ಮಾರ್ಗದರ್ಶನ ನೀಡಿದ ಶಿಕ್ಷಕರಿಗೆ ಅಭಿನಂದಿಸಲಾಯಿತು.