ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಕಾಶ್ಮೀರದಲ್ಲಿ ನಡೆದ ಭಯೋತ್ಪಾಕರ ದಾಳಿಯಿಂದ ಸಾವನಪ್ಪಿದ ಪ್ರವಾಸಿಗರಿಗೆ ನಗರದ ಶಿವಪ್ಪ ನಾಯಕ ವೃತ್ತ ದಲ್ಲಿ ಶ್ರದ್ಧಾಂಜಲಿ.
ಶಿವಮೊಗ್ಗ: ಕಾಶ್ಮೀರದಲ್ಲಿ ನಡೆದ ಭಯೋತ್ಪಾಕರ ದಾಳಿಯಿಂದ ಶಿವಮೊಗ್ಗದ ಮಂಜುನಾಥ್ ಸೇರಿದಂತೆ ಸುಮಾರು ೨೮ಕ್ಕೂ ಹೆಚ್ಚು ಜನ ಹತರಾಗಿದ್ದಾರೆ. ಈ ಘಟನೆಯನ್ನು ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹರ್ಷಿತ್ ಗೌಡ ಅವರು ತೀವ್ರವಾಗಿ ಖಂಡಿಸಿದರು, ಈ ದಾಳಿಯಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಸಿದರು ಈ ಸಭೆಯನ್ನು ಉದ್ದೇಶಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್ ಪ್ರಸನ್ನ ಕುಮಾರ್ ರವರು ಮಾತನಾಡಿ
ನಿನ್ನೆ ಕಾಶ್ಮೀರದಲ್ಲಿ ನಡೆದಿರುವ ಘಟನೆ ಅಮಾನವೀಯವಾಗಿದ್ದು, ಇಡೀ ಮನುಕುಲವೇ ತಲೆತಗ್ಗಿಸುವಂತಹ ಘಟನೆಯಾಗಿದೆ. ಯಾವ ಧರ್ಮಗಳೂ ಕೊಲ್ಲಲು ಹೇಳುವುದಿಲ್ಲ. ಕೊಲ್ಲುವವರಿಗೆ ಧರ್ಮವೇ ಇಲ್ಲ. ಮಾನವ ಸಮಾಜ ತಲೆತಗ್ಗಿಸುವಂತಹ ಹೇಯಕೃತ್ಯವಿದು. ಶಿವಮೊಗ್ಗದ ಮಂಜುನಾಥ್ ಕೂಡ ಬಲಿಯಾಗಿದ್ದಾರೆ. ಈ ಕುಟುಂಬದ ಜೊತೆ ನಾವಿರುತ್ತೇವೆ.
ಕೇಂದ್ರ ಸರ್ಕಾರ ಉಗ್ರರನ್ನು ತಡೆಯುವಲ್ಲಿ ವಿಫಲವಾಗಿದೆ. ಕಾಶ್ಮೀರ ಭಾಗದಲ್ಲಿ ಉಗ್ರರು ಪದೇ ಪದೇ ದಾಳಿ ನಡೆಸುತ್ತಿದ್ದರೂ ಅವರು ಗಡಿಯಿಂದ ನುಸುಳಿ ಭಾರತಕ್ಕೆ ಬರಲು ಕೇಂದ್ರ ಸರ್ಕಾರದ ರಕ್ಷಣಾ ವೈಫಲ್ಯವೇ ಕಾರಣ ಅಂತ ಕಿಡಿ ಕಾರಿದರು
HC ಯೋಗೇಶ್ ಮಾತನಾಡಿ ಭಾರತವನ್ನು ಉಗ್ರರಿಂದ ರಕ್ಷಿಸಬೇಕಾಗಿದೆ. ಈ ಕೃತ್ಯ ಎಸಗಿದವರನ್ನು ಗುಂಡಿಕ್ಕಿ ಕೊಲ್ಲಬೇಕು. ಕಾಶ್ಮೀರ ಮತ್ತು ಕೇಂದ್ರ ಸರ್ಕಾರ ಇವರಿಗೆ ತಕ್ಕ ಪಾಠ ಕಲಿಸಬೇಕು.
ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆ ಇದ್ದರೂ ಅಲ್ಲಿ ಪ್ರವಾಸಿಗರನ್ನು ಬಿಟ್ಟಿದ್ದು ಕೇಂದ್ರ ಸರ್ಕಾರದ ವೈಫಲ್ಯ. ಉಗ್ರರ ದಾಳಿಯಿಂದ ಜನ ಸತ್ತ ಮೇಲೆ ‘ನಾವು ಬಿಡುವುದಿಲ್ಲ’ ಎಂದು ಕೇಂದ್ರ ಸರಕಾರ ಹೇಳಿಕೆ ನೀಡುವುದರಲ್ಲಿ ಯಾವುದೇ ಅರ್ಥ ಇಲ್ಲ.
ಇದೇ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್ ರಮೇಶ್ ಮಾತನಾಡಿ ಇಂತಹ ಭಯೋತ್ಪಾದಕ ಚಟುವಟಿಕೆ ನಡೆದಾಗ ಇಂತಹ ಕೇಂದ್ರ ನಾಯಕರ ಹೇಳಿಕೆ ನಾಚಿಕೆಗೇಡಿನ ಸಂಗತಿಯಾಗಿದೆ.
ನಿನ್ನೆಯ ಘಟನೆಗೆ ಕೇಂದ್ರ ಸರಕಾರದ ಮೃದುಧೋರಣೆಯೇ ಕಾರಣ ಆಗಿದೆ. ಕಾಶ್ಮೀರದಲ್ಲಿ ಕಠಿಣ ಕ್ರಮಕ್ಕೆ ಎರಡೂ ಸರ್ಕಾರ ಮುಂದಾಗಬೇಕು. ಜಮ್ಮು ಕಾಶ್ಮೀರದ ಪೂರ್ಣ ಅಧಿಕಾರ ಕೇಂದ್ರದ ಕೈಯಲ್ಲಿ ಇದೆ. ರಾಜ್ಯ ಸರ್ಕಾರದ ಯಾವುದೇ ಅಧಿಕಾರ ಅಲ್ಲಿ ಇಲ್ಲ. ಆದರೆ, ಕೇಂದ್ರ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಕಾಶ್ಮೀರ ಸರ್ಕಾರದ ಕಡೆ ಬೊಟ್ಟು ಮಾಡುತ್ತಿರುವುದಲ್ಲದೇ ನಿನ್ನೆಯ ಘಟನೆಗೆ ಧರ್ಮದ ಲೇಪ ಬಳಿಯುವ ಪ್ರಯತ್ನ ನಡೆಸುತ್ತಿದೆ. ಇದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ರಮೇಶ್ ಹೆಗಡೆ ಅವರು ಮಾತನಾಡಿ
ಕೂಡಲೇ ಕೇಂದ್ರ ಸರ್ಕಾರ ಉಗ್ರರ ಸದೆಬಡೆಯಲು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು ಈ ಸಂದರ್ಭದಲ್ಲಿ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಿವಕುಮಾರ್, ಮಧುಸೂದನ್, ಚೇತನ್, ಅಕ್ಬರ್,ಇಮ್ರಾನ್, ಯುವ ಕಾಂಗ್ರೆಸ್ ನಗರ ಅಧ್ಯಕ್ಷ ಚರಣ್, ಬಾಲಾಜಿ, ಪ್ರವೀಣ್, ಶಿವಕುಮಾರ್, ಸಕ್ಲೇನ್,ಅಬ್ದುಲ್ ಸತ್ತಾರ್,ಧನುಷ್, ಅನಿಲ್ ಪಾಟೀಲ್ ಅಶೋಕ್, ಮಲವಗೊಪ್ಪ ಶಿವು ಗೌತಮ್ NSUI ಜಿಲ್ಲಾಧ್ಯಕ್ಷ ವಿಜಯ, ರವಿ ಕಾಟಿಕೆರೆ, ಚಂದ್ರೋ ಜಿ ರಾವ್, ಫಾರಂಡ್, ಸುಭಾನ್ ಸಾಕಷ್ಟು ಯುವಕರು ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡಿ ಶ್ರದ್ಧಾಂಜಲಿ ಸಲ್ಲಿಸಿದರು