ಕೆ.ಈ. ಕಾಂತೇಶ್ ಅವರ ಜನ್ಮದಿನ, ಕ್ರೀಡೋತ್ಸವ ಚಲನಚಿತ್ರ ನಟ ಶರಣ್ ಚಾಲನೆ…
ಯುವ ಮುಖಂಡ ಕೆ.ಈ. ಕಾಂತೇಶ್ ಅವರ ಜನ್ಮದಿನದ ಅಂಗವಾಗಿ ನೆಹರು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕ್ರೀಡೋತ್ಸವಕ್ಕೆ ಖ್ಯಾತ ಚಲನ ಚಿತ್ರ ನಟ ಶರಣ್ ಅವರು ಚಾಲನೆ ನೀಡಿದರು, ನಂತರ ಕೆ. ಈ. ಕಾಂತೇಶ್ ಅಭಿಮಾನಿ ಬಳಗ ಸದಸ್ಯರೊಂದಿಗೆ ನೃತ್ಯ ಮಾಡಿ ಮನರಂಜಿಸಿದರು. ಮತ್ತು ಯುವ ಮುಖಂಡರಾದ ಕೆ. ಇ. ಕಾಂತೇಶ್ ಅವರಿಗೆ ಜನ್ಮದಿನದ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಇ. ವಿಶ್ವಾಸ್ ಸೇರಿದಂತೆ ಅಪಾರ ಅಭಿಮಾನಿ ಬಳಗ ಹಾಗೂ ಕ್ರೀಡಾ ಪ್ರೇಮಿಗಳು ಉಪಸ್ಥಿತರಿದ್ದರು


