3,50,000/- ರೂ ಬೆಲೆ ಬಾಳುವ ಸುಮಾರು 900 ಕೆ.ಜಿ. ತೂಕದ ಹಿತ್ತಾಳೆ ಮತ್ತು ತಾಮ್ರದ ಗುಜರಿ ವಸ್ತುಗಳ ಸುಲಿಗೆ -ಬಂಧನ

ರಾಜ್ಯ ರಾಷ್ಟ್ರೀಯ ಶಿವಮೊಗ್ಗ
3,50,000/- ರೂ ಬೆಲೆ ಬಾಳುವ ಸುಮಾರು 900 ಕೆ.ಜಿ. ತೂಕದ ಹಿತ್ತಾಳೆ ಮತ್ತು ತಾಮ್ರದ ಗುಜರಿ ವಸ್ತುಗಳ ಸುಲಿಗೆ -ಬಂಧನ

ದಿನಾಂಕ:25-03-2025 ರಂದು *ಕಾರ್ತಿಕ್, 22 ವರ್ಷ, ಆರ್.ಎಂ.ಎಲ್ ನಗರ ಶಿವಮೊಗ್ಗ* ರವರು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ *ರಾಮಿನಕೊಪ್ಪ ಕ್ರಾಸ್ ಹತ್ತಿರ ಓಮಿನಿ ಕಾರನ್ನು* ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ, ಬೆಳಗಿನ ಜಾವ ಸುಮಾರು 06:35 ಗಂಟೆ ಸಮಯದಲ್ಲಿ *ಯಾರೋ 4 ಜನರು 2 ಮೋಟಾರು ಬೈಕುಗಳಲ್ಲಿ ಕಾರನ್ನು ಆಡ್ಡ ಹಾಕಿ ತಡೆದು 3,50,000/- ರೂ ಬೆಲೆ ಬಾಳುವ ಸುಮಾರು 900 ಕೆ.ಜಿ. ತೂಕದ ಹಿತ್ತಾಳೆ ಮತ್ತು ತಾಮ್ರದ ಗುಜರಿ ವಸ್ತುಗಳನ್ನು ಸುಲಿಗೆ* ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0060/2025 ಕಲಂ 309 (6) ಬಿ.ಎನ್.ಎಸ್ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

ಪ್ರಕರಣದಲ್ಲಿ ಮಾಲು ಹಾಗೂ ಆರೋಪಿತರ ಪತ್ತೆ ಬಗ್ಗೆ, *ಶ್ರೀ ಮಿಥುನ್ ಕುಮಾರ್ ಜಿ. ಕೆ. ಐಪಿಎಸ್,* ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ *ಶ್ರೀ ಅನಿಲ್ ಕುಮಾರ್ ಭುಮರಡ್ಡಿ* ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ಶಿವಮೊಗ್ಗ ಜಿಲ್ಲೆ ಹಾಗೂ *ಶ್ರೀ ಎ. ಜಿ. ಕಾರ್ಯಪ್ಪ* ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, *ಶ್ರೀ ನಾಗರಾಜ* ಪೊಲೀಸ್ ಉಪಾಧೀಕ್ಷಕರು, ಭದ್ರಾವತಿ ಉಪ ವಿಭಾಗ ರವರ ಮೇಲ್ವಿಚಾರಣೆಯಲ್ಲಿ, *ಶ್ರೀ ಜಗದೀಶ್ ಹಂಚಿನಾಳ್,* ಪಿ ಐ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ, *ಶ್ರೀಶೈಲಕೆಂಚಣ್ಣವರ,* ಪಿಎಸ್ಐ ಮತ್ತು ಎ.ಎಸ್.ಐ. ಚಂದ್ರಶೇಖರ್, ದಿವಾಕರ್ ರಾವ್ ಮತ್ತು ಸಿಬ್ಬಂಧಿಗಳಾದ *ಹೆಚ್.ಸಿ* ಮಂಜುನಾಥ, ಸಿ.ಪಿ.ಸಿ ಈರಯ್ಯ, ರೇವಣ ಸಿದ್ದಪ್ಪ, ವಿಜಯ್ ಕುಮಾರ್ ಹಾಗೂ ಸಂತೋಷ ಕುಮಾರ ರವರನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.

ಸದರಿ ತನಿಖಾ ತಂಡವು ಪ್ರಕರಣದ ಆರೋಪಿತರಾದ *1) ಕವಿರಾಜ, 21 ವರ್ಷ, ಭೋವಿ ಕಾಲೋನಿ ಹೊಸಮನೆ ಭದ್ರಾವತಿ , 2) ಮುಬಾರಕ್, 24 ವರ್ಷ, ಮೇಲಿನ ತುಂಗಾನಗರ ಶಿವಮೊಗ್ಗ, 3) ಅಜಿತ್ @ ಘಟ್ಟ, 19 ವರ್ಷ ಬಾರಂದೂರು, ಭದ್ರಾವತಿ 4) ಮಂಜುನಾಥ @ ಮಂಜು, 21 ವರ್ಷ, ಕಬಳಿಕಟ್ಟೆ ಗ್ರಾಮ, ಭದ್ರಾವತಿ,* ಇವರನ್ನು ದಸ್ತಗಿರಿ ಮಾಡಿ ಸದರಿ ಆರೋಪಿತರಿಂದ *ಅಂದಾಜು ಮೌಲ್ಯ 3,50,000/- ರೂಗಳ* ಕಳ್ಳತನ ಮಾಡಿದ 700 ಕೆ.ಜಿ ತೂಕದ ಹಿತ್ತಾಳೆ ಮತ್ತು ತಾಮ್ರದ ಗುಜರಿ ವಸ್ತುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ *ಅಂದಾಜು ಮೌಲ್ಯ 3,00,000/- ರೂಗಳ* TATA ACE ವಾಹನ ಮತ್ತು *ಅಂದಾಜು ಮೌಲ್ಯ 85,000/- ರೂಗಳ* ಪಲ್ಸರ್ ಬೈಕ್ ಸೇರಿ *ಒಟ್ಟು ಮೌಲ್ಯ, 7,35,000 ರೂ ಗಳ ಮಾಲನ್ನು* ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.

ಸದರಿ ತನಿಖಾ ತಂಡದ *ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ* ಅಭಿನಂದಿಸಿರುತ್ತಾರೆ.