ಎರಡು ರನ್ ಗಳಿಂದ ಸಿ ಎಸ್ ಕೆ ವಿರುದ್ಧ ರೋಚಕ ಗೆಲುವು ಪಡೆದ ಆರ್ ಸಿ ಬಿ 

ಅಂತರ್ರಾಷ್ಟ್ರೀಯ ಕ್ರೀಡೆ ರಾಜ್ಯ
  • ಎರಡು ರನ್ನುಗಳಿಂದ ಸಿ ಎಸ್ ಕೆ ವಿರುದ್ಧ ರೋಚಕ ಗೆಲುವು ಪಡೆದ ಆರ್ ಸಿ ಬಿ 

ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ ನಡುವಿನ ಪಂದ್ಯ ರೋಚಕ ತಿರುವು ಪಡೆದುಕೊಂಡಿತು, 
ಕೊನೆಯ ಬಾಲ್ನವರೆಗೆ ಪಂದ್ಯದ ರೋಚಕತೆ ಪ್ರೇಕ್ಷಕರನ್ನು ಹಿಡಿದಿಟ್ಟಿತು, 
ವಿರಾಟ್ಟ್ ಕೊಹ್ಲಿ 62 ರನ್, ಜೆ.ಬಿ. ಬೇತಲ್- 55 ರನ್, ಶೇಫಾರ್ಡ್ -53 ರನ್ ಗಳಿಸುವ ಮೂಲಕ
ಆರ್ ಸಿ ಬಿ ತಂಡ 213 ರನ್ನ ಗುರಿಯನ್ನು 20 ಓವರ್ ಗಳಲ್ಲಿ ಬ್ಯಾಟ್ ಮಾಡುವ ಮೂಲಕ csk ಗೆ ನೀಡಿತು,
ಉತ್ತಮ ಆರಂಭಿಕ ಜೊತೆ ಆಟದ ಮೂಲಕ ರವೀಂದ್ರ ಜಡೇಜಾ 77 ರನ್, ಆಯುಷ್ ಮಹತ್ರೆ- 94 ರನ್ ಗಳಿಸುವ ಮೂಲಕ ಪಂದ್ಯ ಗೆಲ್ಲುವ ಅಂತಕ್ಕೆ ಸಮೀಪಿಸಿ 211 ರನ್ ಗಳಿಸಿ ಕೇವಲ 2 ರನ್ ಗಳಿಂದ ಸೋಲನಪ್ಪಿತ್ತು,
ಕೊನೆಯ ಓವರ್ ನಲ್ಲಿ ಬಾಲ್ ಮಾಡಿದ ದಯಳ್ ನೋಬಲ್ ಮಾಡುವ ಮೂಲಕ 6 ರನ್ ನೀಡಿ ಪಂದ್ಯ ಕೈತಪ್ಪಿತ್ತು ತಿನ್ನುವ ಅಂತಕ್ಕೆ ತಲುಪಿತು
ಆದರೆ ಕೊನೆಯ ಮೂರು ಎಸೆತಗಳನ್ನು ನಿಯಂತ್ರಿಸುವ ಮೂಲಕ ಆರ್ ಸಿಬಿ ತಂಡಕ್ಕೆ ವಿಜಯಮಾಲೆ ತಂದು ಕೊಟ್ಟರು,