ಬಿಎಸ್ ವೈ ಮತ್ತು ಸದನಕ್ಕೆ ಕೃತಜ್ಞತೆ ಸಲ್ಲಿಸಿದ ಎಸ್. ರುದ್ರೇಗೌಡರು

ರಾಜಕೀಯ

ಬಿ ಎಸ್ ಯಡಿಯೂರಪ್ಪನವರಿಗೆ ಮತ್ತು ಸದನದ ಎಲ್ಲರಿಗೂ ಧನ್ಯವಾದ ಅರ್ಪಿಸಿದ ಶ್ರೀ ಎಸ್ ರುದ್ರೇಗೌಡರು* ಬೆಂಗಳೂರಿನ ವಿಧಾನಸೌಧ ದಲ್ಲಿ ವಿಧಾನ ಪರಿಷತ್ತಿನ ಸಭಾಪತಿಯವರಾದ ಸನ್ಮಾನ್ಯ *ಶ್ರೀ ಬಸವರಾಜ್ ಹೊರಟ್ಟಿ* ಅವರ ಅಧ್ಯಕ್ಷತೆಯಲ್ಲಿ ವಿಧಾನ ಪರಿಷತ್ತಿನಿಂದ ನಿವೃತ್ತಿ ಹೊಂದಿದ ಪರಿಷತ್ ಶಾಸಕರುಗಳಿಗೆ ಗೌರವ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು,ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಮಾತನಾಡಿದ, ನಿಕಟಪೂರ್ವ ವಿಧಾನ ಪರಿಷತ್ ಶಾಸಕರಾದ. . *ಶ್ರೀ ಎಸ್ ರುದ್ರೇಗೌಡರು*,

ನಾನು 6 ವರ್ಷಗಳಲ್ಲಿ ವಿಧಾನ ಪರಿಷತ್ ಶಾಸಕನಾಗಿ ವಿಧಾನಪರಿಷತ್ತಿನಲ್ಲಿ ಚರ್ಚಿಸಿದ ವಿಷಯಗಳು ಅಷ್ಟೊಂದು ಸಮಾಧಾನವಾಗಿಲ್ಲ ಏಕೆಂದರೆ ನಾನೊಬ್ಬ ಕೈಗಾರಿಕೋದ್ಯಮಿಯಾಗಿ.. ಕಳೆದ 40 ವರ್ಷಗಳಲ್ಲಿ ನಮ್ಮ ಬೇರೆ ಬೇರೆ ಸಂಘಟನೆಗಳ ಮೂಲಕ..ಸಾಕಷ್ಟು ಕೆಲಸಗಳನ್ನು ನಾವು ಮಾಡಿದ್ದೇವೆ..ಆದರೆ ಸದನದಲ್ಲಿ ನಾವು ಬರೀ ಮಾತು ಆಗುತ್ತಿತ್ತೆ ಹೊರತು ಅದಕ್ಕೆ ಸೂಕ್ತವಾದ ಉತ್ತರ ಸಿಗುತ್ತಿರಲಿಲ್ಲ. ಅದು ದುರ್ದೈವದ ಸಂಗತಿ ಇದು ಬದಲಾವಣೆಯಾದರೆ ಖಂಡಿತವಾಗಿಯೂ ಈ ಅವಸ್ಥೆ ಅದ್ಭುತವಾದ ವ್ಯವಸ್ಥೆ ಆಗುತ್ತದೆ.. ಸರ್ಕಾರದ ಎಲ್ಲಾ ಹಲವಾರು ಯೋಜನೆಗಳಿವೆ ಅದು ಜನಸಾಮಾನ್ಯರಿಗೆ.. ಸಾಮಾನ್ಯ ಜನರಿಗೆ ತಲುಪಿಸಿದಲ್ಲಿ. ಇಡೀ ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸಲು ಸಾಕಷ್ಟು ಸಹಕಾರಿಯಾಗುತ್ತೆ. ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಸರ್ಕಾರದಲ್ಲಿ ಒಂದಷ್ಟು ದಿನ ಎಲ್ಲಾ ಹಿರಿಯರ,ಮಧ್ಯೆ ಚರ್ಚೆ ಮಾಡಲಿಕ್ಕೆ,ಅವಕಾಶ ಮಾಡಿಕೊಟ್ಟ. ನಮ್ಮ ಪಕ್ಷದ ಹಿರಿಯರಾದ ಸನ್ಮಾನ್ಯ  ಬಿ.ಎಸ್ ಯಡಿಯೂರಪ್ಪನವರಿಗೂ* ಹಾಗೂ ಸದನದಲ್ಲಿ ಇರುವ ಎಲ್ಲರಿಗೂ ನಾನು ಧನ್ಯವಾದಗಳು ಅರ್ಪಿಸುತ್ತೇನೆ ಎಂದು ನಿಕಟಪೂರ್ವ ವಿಧಾನ ಪರಿಷತ್ ಶಾಸಕರಾದ  ಎಸ್.ರುದ್ರೇಗೌಡರು ಹೇಳಿದ್ದಾರೆ.