ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಅವೈಜ್ಞಾನಿಕವಾಗಿದ್ದು ಹಾಗೂ ಪರಿಸರಕ್ಕೆ ಮಾರಕವಾಗಿದೆ ಈ ಯೋಜನೆಯನ್ನು ಸರ್ಕಾರ ಕೈ ಬಿಡಬೇಕೆಂದು ಆಗ್ರಹಿಸಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ವನ್ಯಜೀವಿ ಛಾಯಾಗ್ರಾಹಕರ ಸಂಘ, ತೀರ್ಥಹಳ್ಳಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಶರಾವತಿ ಕಣಿವೆ ಪರಿಸರ ಸೂಕ್ಷ್ಮ ಪ್ರದೇಶವಾಗಿದ್ದು ಇಲ್ಲಿ ಸಾವಿರಾರು ಪ್ರಭೇದಗಳು ಹಾಗೂ ವನ್ಯಜೀವಿಗಳು, ದಟ್ಟ ಅರಣ್ಯಗಳಿಂದ ಕೂಡಿದೆ,
ಶರವತಿ ಪಂಪ್ ಸ್ಟೋರೇಜ್ ಯೋಜನೆಯಿಂದ ಕಾಡು ನಾಶವಾಗುತ್ತದೆ, ಭೂಕುಸಿತ ಉಂಟಾಗುತ್ತದೆ ಹಾಗೂ ಸಾವಿರಾರು ಸಂಖ್ಯೆಯ ವನ್ಯಜೀವಿಗಳಿಗೆ ಮಾರಕವಾಗಿದೆ. ಅಲ್ಲದೆ ಶರಾವತಿ ಅಣೆಕಟ್ಟಿನಿಂದ ನಿರಾಶಿತರಾಗಿ ಬದುಕಿಗೆ ಕಟ್ಟಿಕೊಂಡವರ ಬದುಕು ಪುನ ಬೀದಿಗೆ ಬರಲಿದೆ, ಜನ ವಿರೋಧಿ ಯೋಜನೆಯನ್ನು ಈ ಕೂಡಲೇ ಕೈಬಿಡಬೇಕು ಎಂದು ಕೆ.ಪಿ. ಪೂರ್ಣಚಂದ್ರ ತೇಜಸ್ವಿ ವನ್ಯಜೀವಿ ಛಾಯಾಗ್ರಹಕರ ಸಂಘ ಆಗ್ರಹಿಸಿ ತೀರ್ಥಳ್ಳಿಯ ಉಪತಾಶಿಲ್ದಾರ್ ಕೆ.ಎಸ್. ಸತ್ಯಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಪ್ರಮುಖರರು ಹಾಗೂ ಪರಿಸರವಾದಿಗಳಾದ ಮಂಡಗದ್ದೆ ನಟರಾಜ್, ವಿನಾಯಕ ಗುಜ್ಜರ್, ಪ್ರದೀಪ್ ಕುಣಿಬೈಲು, ಪ್ರತೀಕ್ ಹಾದಿಗಲ್, ಶಿವಕುಮಾರ್ ತೀರ್ಥಹಳ್ಳಿ ಉಪಸಿತರಿದ್ದರು

