ದಲಿತರಿಗೆ ಭೂಮಿ ಹಕ್ಕು ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ರಾಜ್ಯ ಶಿವಮೊಗ್ಗ
ದಲಿತರಿಗೆ ಭೂಮಿ ಹಕ್ಕು ನೀಡಬೇಕೆಂದು ಆಗ್ರಹಿಸಿ ಶಿವಮೊಗ್ಗದ ತಾಲೂಕಛೇರಿ ಆವರಣದಲ್ಲಿ ಶುಕ್ರವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು,…

 

ಹಕ್ಕೊತಾಯ..
ಪರಿಶಿಷ್ಟ ಜಾತಿ / ವರ್ಗ ಹಾಗೂ ಭೂಹೀನ ತಳ ಸಮುದಾಯ ಉಳಿಮೆ ಮಾಡುತ್ತಿರುವ ಬಗರುಕುಂ ಸಾಗುವಳಿ ಕಾಲಮಿತಿ ಒಳಗಾಗಿ ಇತ್ಯರ್ಥ ಪಡಿಸಬೇಕು,
ವಿನಾಕಾರಣ ವುಜಗೊಳಿಸಿರುವ ಬಗರ್ ಹುಕುಂ ಸಾಗುವಳಿ ಅರ್ಜಿಯನ್ನು ಪರಿಶೀಲನೆ ನಡೆಸಬೇಕು,
ಪರಿಶಿಷ್ಟರ ಪಿಟೀಸಿಎಲ್ ಕಾಯ್ದೆಗೆ ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿಯನ್ನು ಮಾನ್ಯ ಮಾಡಿದ ಕಂದಾಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು

 

 

ರಾಜ್ಯದ್ಯಂತ 30 40 ವರ್ಷಗಳ ಹಿಂದೆ ಮಂಜೂರು ಮಾಡಿ ಸಾಗುವಳಿ ನೀಡಿರುವ ಭೂಮಿಗೆ ಈಗ ಅರಣ್ಯ ಭೂಮಿ ಎಂದು ನೋಟಿಸ್ ನೀಡಿ ಖಾತೆ ವಜಾ ಮಾಡಲು ನೀಡಿರುವುದನ್ನು ಸರ್ಕಾರ ಯಾವುದೇ ಕಾರಣಕ್ಕೂ ಖಾತೆ ವಜಾ ಮಾಡಬಾರದು,
ಸಾಗುವಳಿದಾರರಿಗೆ ತೊಂದರೆಯಾಗದಂತೆ ಸರ್ಕಾರ ಕಾನೂನು ತಿದ್ದುಪಡಿ ಮಾಡಬೇಕು ಎಂದು ವಿವಿಧ ಬೇಡಿಕೆಗಳ ಈಡೇರಿಕೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಕ್ಕೊತಾಯಗಳ ಮನವಿ ನೀಡಿದೆ,
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಮೈಸೂರು ವಿಭಾಗದ ಸಂಚಾಲಕರಾದ ಟಿ. ಎಚ್. ಹಾಲೇಶಪ್ಪ, ಜಿಲ್ಲಾ ಸಂಚಾಲಕ ಶೇಷಪ್ಪ ಹುಣಸೂಡು, ತಾಲೂಕ್ ಸಂಚಾಲಕ ಪರಮೇಶ್ ಸೂಗೂರು, ಜಿಲ್ಲಾ ಸಂಘಟನಾ ಸಂಚಾಲಕ ಎಂ ಆರ್ ಶಿವಕುಮಾರ್ ಹಸ್ತಿ, ಎಂ ಮಂಜುನಾಥ್, ಎ.ಡಿ, ಆನಂದ್, ಟಿ ಹನುಮಂತಪ್ಪ, ಲತಾ, ಮೀನಾ, ಸೇರಿದಂತೆ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು