29 ರಂದು ನಿರ್ಮಲ ಅಭಿನಂದನ ಮತ್ತು ಆರೋಗ್ಯ ಹೊತ್ತಿಗೆ ಬಿಡುಗಡೆ
ದಟ್ಟ ಮಲೆನಾಡಿನ ಶೃಂಗೇರಿಯ ಸಮೀಪದ ಹಳ್ಳಿಯಲ್ಲಿ ಮುಕ್ಕಾಲು ಶತಮಾನದ ಪೂರ್ವದಲ್ಲಿ ಜನಿಸಿ ಕನ್ನಡ ಮಾದ್ಯಮದಲ್ಲಿ ಓದಿ ಪ್ರತಿಷ್ಠಿತ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಪದವಿ ಪಡೆದವರು ಡಾ. ಎಚ್ ಟಿ ನಿರ್ಮಲ ಅವರು.ಡಾಕ್ಟರ್ ಪದವಿ ಓದಿ ಪಟ್ಟಣ ಸೇರದೆ, ಶೃಂಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೊದಲ ಮಹಿಳಾ ವೈದ್ಯರಾಗಿ ಸೇವೆ ಪ್ರಾರಂಭಿಸುತ್ತಾರೆ
.ಅಲ್ಲಿ ಮಹಿಳೆ ಯರ ಹೆರಿಗೆ ಸಮಸ್ಯೆಯನ್ನು ಅರಿತು ಮಕ್ಕಳು ,ಸಂಸಾರವನ್ನು ಕುಟುಂಬ ಸಹಕಾರದಿಂದ ನಿರ್ವಹಿಸುತ್ತಾ ,ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹೆಚ್ಚಿನ ಅಧ್ಯಯನ ಮಾಡಿ ಪ್ರಸೂತಿ ತಜ್ಞೆ ಆಗುತ್ತಾರೆ.ಅಂದಿನ ಮಲೆನಾಡಿನ ಪ್ರತಿಷ್ಠಿತ ಮೆಗ್ಗಾನ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ಜನ ಮನ್ನಣೆ ಗಳಿಸಿದ್ದಾರೆ.ದೂರದ ಬೀದರ್ ಜಿಲ್ಲೆಗೆ ವರ್ಗಾವಣೆ ಮಾಡಿದಾಗ ಬೇಸತ್ತು ರಾಜಿನಾಮೆ ನೀಡಿ ,ಸ್ವಂತ ಮನೆಯನ್ನೇ ಆಸ್ಪತ್ರೆಯಾಗಿ ಪರಿವರ್ತಿಸಿ ಆರೋಗ್ಯ ಸೇವೆ ಮಾಡುತ್ತಾರೆ.
ಇವರ ಆಸ್ಪತ್ರೆ ಶ್ರೀಸಾಮಾನ್ಯರ ಆಸ್ಪತ್ರೆ ಎಂದು ಮನ್ನಣೆ ಪಡೆದಿದೆ.ವೈದ್ಯಕೀಯ,ಆಡಳಿತ,ಕುಟುಂಬ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಕೆಲವು ಬರಹವನ್ನು ಜೊತೆಗೂಡಿಸಿಕೊಂಡಿದ್ದಾರೆ.ಅದರೊಂದಿಗೆ ಸಾಮಾಜಿಕ ಸೇವೆಯನ್ನು ಮಾಡುತ್ತಾ ತಾನು ಓದಿದ ಶೃಂಗೇರಿ ವಿದ್ಯಾಸಂಸ್ಥೆ ಗಳಲ್ಲಿ ಓದುವ ಬಡ ಮಕ್ಕಳಿಗೆ ನಿರಂತರ ಹಣ ಸಹಾಯ ಮಾಡುತ್ತಾ ಬಂದಿದ್ದಾರೆ..
ಇವರ ಸೇವೆಯ ಸುವರ್ಣ ವರ್ಷದ ನೆನಪಿಗಾಗಿ,ಹಿತೈಷಿಗಳು,ಕುಟುಂಬಸ್ಥರು ಕೂಡಿ ಅವರ ಕುರಿತು ಒಂದು ಪುಸ್ತಕವನ್ನು ಹೊರತಂದು ಅಭಿನಂದನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.ನಿರ್ಮಲ ಅಭಿನಂದನ ಮತ್ತು ಆರೋಗ್ಯ ಹೊತ್ತಿಗೆಯಲ್ಲಿ ನಿರ್ಮಲ ಕುರಿತು ಅವರ ಆಪ್ತರ ಲೇಖನಗಳು ಮತ್ತು ಎರಡನೇ ಭಾಗದಲ್ಲಿ ಆರೋಗ್ಯ ಕುರಿತ ಮೌಲಿಕ ಬರಹಗಳು ಇವೆ. ಪುಸ್ತಕವನ್ನು ನಿವೃತ್ತ ಪ್ರಾಂಶುಪಾಲರು ಮತ್ತು ವಿಮರ್ಶಕರು ಆದ ಡಾ ಎಚ್ ಟಿ ಕೃಷ್ಣಮೂರ್ತಿ ಸಂಪಾದಿಸಿದ್ದಾರೆ.
ಮತ್ತು ಪುಸ್ತಕ ಬಿಡುಗಡೆ ಕಾರ್ಯ ಕ್ರಮವು ದಿನಾಂಕ 29,ಜೂನ್ 2025 ರಂದು ಭಾನುವಾರ ಶಿವಮೊಗ್ಗದ ಕುವೆಂಪು ರಂಗ ಮಂದಿರದಲ್ಲಿ ಬೆಳಿಗ್ಗೆ ಹನ್ನೊಂದು ಘಂಟೆಗೆ ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮದಲ್ಲಿ ಖ್ಯಾತ ಹೃದ್ರೋಗ ತಜ್ಞ ರಾದ ವಿಜಯಲಕ್ಷ್ಮಿ ಬಾಳೇಕುಂ ದ್ರಿ ,ವಿದಾನ ಪರಿಷತ್ ಸದಸ್ಯರಾದ ಡಾ ಧನಂಜಯ ಸರ್ಜಿ ಮತ್ತು ಖ್ಯಾತ ಮನೋವೈದ್ಯ ಡಾ ಕೆ ಆರ್ ಶ್ರೀಧರ್ ಇವರುಗಳು ಅತಿಥಿಯಾಗಿ ಭಾಗವಹಿಸುತ್ತಾರೆ.ಗೌರವ ಉಪಸ್ಥಿತಿ ಡಾ ನಿರ್ಮಲ,ಪುಸ್ತಕ ಕುರಿತು ಡಾ. ಎಚ್ ಟಿ ಕೃಷ್ಣಮೂರ್ತಿಮತ್ತು ಡಾ ಕೆ ವಿ ಪಲ್ಲವಿ ಪ್ರಾಸ್ತಾವಿಕ ಮಾತುಗಳನ್ನು ಆಡಲಿದ್ದಾರೆ

