ಡಿಸಿ ಕಛೇರಿ ಎದುರಿನ ಜಾಗ ನಗರಪಾಲಿಕೆಗೆ ಸೇರಿದ್ದು ಈ ಮೈದಾನ ಸಂರಕ್ಷಿಸಲು ರಾಷ್ಟ್ರಭಕ್ತರ ಬಳಗದ ಆಗ್ರಹ
ಶಿವಮೊಗ್ಗ : ನಗರದ ಜಿಲ್ಲಾಧಿ ಕಾರಿಗಳ ಕಛೇರಿ ಎದುರಿಗೆ ಇರುವ ಮಹಾನಗರ ಪಾಲಿಕೆಗೆ ಸೇರಿದ ಸರ್ಕಾರಿ ಜಾಗವನ್ನು ಆಟದ ಸಂರಕ್ಷಿಸುವಂತೆ ಆಗ್ರಹಿಸಿ ರಾಷ್ಟ್ರಭಕ್ತ
ಬಳಗದ ಕಾನೂನು ವಿಭಾಗದಿಂದ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಕಾನೂನು ವಿಭಾಗದ ವಕೀಲ ಮಾತನಾಡಿ, ಜಾಗವಾಗಿದ್ದು, ಹಲವಾರು ದಶಕಗಳಿಂದಲೂ ಸಾರ್ವಜನಿಕ ಉದ್ದೇಶಕ್ಕೆ ಉಪಯೋಗಿಸುತ್ತಾ ಬರಲಾಗಿದೆ. ಸದರಿ ಸ್ವತ್ತು ಘನ ಸರ್ಕಾರದ ಜಾಗವಾಗಿದ್ದು ಹಾಗೂ ಸರ್ಕಾರದ ಅಂಗಸಂಸ್ಥೆ ಯಾದ ಶಿವಮೊಗ್ಗ ಮಹಾನಗರ ಪಾಲಿಕೆಯ ಹಕ್ಕು, ಹಿತಾಸಕ್ತಿ ಒಡೆತನಕ್ಕೆ ಒಳಪಟ್ಟ ಜಾಗವಾಗಿರುತ್ತದೆ ಎಂದರು. ಅನುಸೂಚಿತ ಸ್ವತ್ತು ಸರ್ಕಾರಿ
ಈ ಜಾಗಕ್ಕೆ ಲಗತ್ತಾಗಿ ಸರ್ಕಾರಿ ಕಚೇರಿಗಳಾದ ಜಿಲ್ಲಾಧಿಕಾರಿಗಳ ಕಚೇರಿ, ಆರ್.ಟಿ.ಓ. ಕಚೇರಿ, ಜಯನಗರ ಪೋಲೀಸ್ ಠಾಣೆ ಹಾಗು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇನ್ನೂ ಹತ್ತು ಹಲವು ಖಾಸಗಿ ವಾಣಿಜ್ಯ ವ್ಯವಹಾರ ನಡೆಯುವ ಸ್ಥಳದ ಮಧ್ಯಭಾಗದಲ್ಲಿ ಇರುವ ಖಾಲಿ ಜಾಗವಾಗಿದ್ದು, ಸದರಿ ಜಾಗವನ್ನು ಹಲವಾರು ದಶಕಗಳಿಂದಲು
ಸಾರ್ವಜನಿಕರು ತಮ್ಮ ತಮ್ಮ ದೈನಂದಿನ ಬ್ಯಾಂಕ್, ಸರ್ಕಾರಿ ಇನ್ನಿತರೆ ಕಾರ್ಯಗಳಿಗೆ ತಮ್ಮ ಓಡಾಟ, ವಾಹನ ನಿಲುಗಡೆ ಮತ್ತು ಇನ್ನಿತರೆ ಉದ್ದೇಶಕ್ಕೆ ಉಪಯೋಗಿಸುತ್ತಿದ್ದು ನಿರ್ವಿವಾದಿತ ಜಾಗವಾಗಿದೆ.
ಶಿವಮೊಗ್ಗ ಮಹಾನಗರ ಯೋಜನೆ 2031ರ ರಾಜ್ಯ ಸರ್ಕಾರದ ವತಿಯಿಂದ ಅಧಿ ಸೂಚನೆಯನ್ನು ಹೊರಡಿಸಿದೆ. ಈ ಬಗ್ಗೆ ಮಹಾನಗರ ಯೋಜನೆಯ ಒಂದು ಮಾಸ್ಟರ್ ಪ್ಲಾನ್ ರಚಿತಗೊಂಡಿದ್ದು ಸದರಿ ಪ್ಲಾನ್ ಸಹ 2012ರಲ್ಲಿಯೇ ಅನುಮೋದನೆ ಗೊಂಡು ಅಧಿ ಸೂಚನೆಯಲ್ಲಿ ಘೋಷಿತ ವಾಗಿರುತ್ತದೆ. ಸದರಿ ಶಿವಮೊಗ್ಗ ಮಹಾನಗರ ಯೋಜನೆ-2031ರ ಮಹಾನಗರಕ್ಕೆ ಮತ್ತು ಸಂಪೂರ್ಣ ಜೋನಲ್ ರೆಗ್ಯುಲೇಶನ್ ಇದನ್ನು ಅನುಮೋದಿಸಿದ್ದು, ಸದರಿ ಮಹಾನಕ್ಷೆಯನ್ವಯ ಪ್ರಶ್ಚಿತ ಸ್ವತ್ತು ಸಾರ್ವಜನಿಕ ಉದ್ಯಾನವನಕ್ಕೆ ಮೀಸಲಿಟ್ಟ ಜಾಗವಾಗಿದ್ದು ದಟ್ಟ ಹಸಿರು ಬಣ್ಣದಿಂದ ಗುರುತಿ ಸಲ್ಪಟ್ಟಿದೆ ಎಂದು ಆಯುಕ್ತರ ಗಮನ ಸೆಳೆದರು. ಕಾನೂನು ಬಾಹಿರ ವಾಗಿ ಸ್ವತ್ತಿನ ಪಶ್ಚಿಮ ದಿಕ್ಕಿನಲ್ಲಿರುವ 20 ಅಡಿ ವಿಸ್ತೀರ್ಣದ ರಸ್ತೆಯ
ಮಧ್ಯಭಾಗದಲ್ಲಿ ಸುಮಾರು
1.2ಮೀ. ಮತ್ತು 6.8ಮೀನ ಒಂದು ಗೋಡೆ ಆಕಾರದ ಧಾರ್ಮಿಕ ಆಕೃತಿಯನ್ನು ಅನಧಿಕೃತವಾಗಿ ಕಟ್ಟಿ ಕೇವಲ ವರ್ಷಕ್ಕೆರಡು ಬಾರಿ ರಂಜಾನ್ ಮತ್ತು ಬಕ್ರೀದ್ ಹಬ್ಬದ ದಿನದಂದು ಮಾತ್ರ ಸಾಮೂಹಿಕ ಪ್ರಾರ್ಥನೆಯನ್ನು ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಆ ಜಾಗ ತಮ್ಮದೇ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆಂದು ಅವರು ದೂರಿದರು. ಯಾವುದೇ ಸ್ಥಳದ ಚಕ್ಕುಬಂಧಿಯ ವಿವರಗಳು ಇಲ್ಲದಾಗ್ಯೂ ಸದರಿ ಸ್ವತ್ತು ಆಜರ್ ಮೊಹಲ್ಲಾ ಎಂಬ ವಿಳಾಸ ಮಾತ್ರ ಇರುತ್ತದೆ. ಸದರಿ ಅಜರ್ ಮೊಹಲ್ಲ ಹಾಲಿ ಶಿವಮೊಗ್ಗ ನಗರದ ಬಿ.ಹೆಚ್. ರಸ್ತೆಯ ಶಿವಪ್ಪ ನಾಯಕ ವೃತ್ತ / ಅಮೀರ್ ಅಹ್ಮದ್ ವೃತ್ತ ಎಂದು ಕರೆಯಲ್ಪಡುವ ಜಾಗದಿಂದ ಎಂ.ಕೆ.ಕೆ. ರಸ್ತೆಯ ಜಾಗದಲ್ಲಿರುವ ಪ್ರದೇಶವಾಗಿದ್ದು, ಸುಮ್ಮನೆ ದುರುದ್ದೇಶದಿಂದ ಯಾವುದೋ ಜಾಗದ ನೋಟಿಫಿಕೇಷನ್ ಪಡೆದು ಕೊಂಡು ಈ ಆಟದ ಮೈದಾನ ಜಾಗವನ್ನು ಕಬಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಸದರಿ ಜಾಗವು ‘ವಕ್ಸ್ ಮಂಡಳಿಗೆ ಸೇರಿದ್ದು ಎನ್ನುವುದಕ್ಕೆ ಸೂಕ್ತ ದಾಖಲೆಗಳಿಲ್ಲದಿದ್ದರೂ ನಿಯದು ಬಾಹಿರವಾಗಿ ಖಾತೆ ಮಾಡಿಕೊಡ ಲಾಗಿದೆ. ಇದಕ್ಕೆ ಸಂಬಂಧಿಸಿದಂತೆ
ಅಂದಿನ ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರು ಜಿಲ್ಲಾಧಿ ಕಾರಿಗಳಿಗೆ ಪತ್ರ ಬರೆದು, ಭೂಮಾಪಕರು ಸಲ್ಲಿಸಿದ ನಕ್ಷೆಯಲ್ಲಿ ಸದರಿ ಇಲಾಖೆಯ ಮುಖ್ಯಸ್ಥರ ಸಹಿಯೇ ಇಲ್ಲದಿರುವುದನ್ನು ಗುರುತಿಸಿರುತ್ತಾರೆ ಹಾಗೂ ಸದರಿ ಸ್ಥಳದ ವಿಳಾಸವು ಗೆಜೆಟ್ ನೋಟಿಪಿಕೇಷನ್ ನಲ್ಲಿ ಇರುವುದಿಲ್ಲ ಎಂದಿದ್ದಾರೆ.
