ದುರ್ಗಿಗುಡಿ ಸೊಸೈಟಿ ನೂತನ ಅಧ್ಯಕ್ಷರಾಗಿ ನರಸಿಂಹ ಗಂಧದಮನೆ : ಹ್ಯಾಟ್ರಿಕ್ ಸಾಧನೆ

ಶಿವಮೊಗ್ಗ

ದುರ್ಗಿಗುಡಿ ಸೊಸೈಟಿ ನೂತನ ಅಧ್ಯಕ್ಷರಾಗಿ ನರಸಿಂಹ ಗಂಧದಮನೆ : ಹ್ಯಾಟ್ರಿಕ್ ಸಾಧನೆ

 

ಶಿವಮೊಗ್ಗ:-ನಗರದ ಪ್ರತಿಷ್ಠಿತ ದುರ್ಗಿಗುಡಿ ಕೋ-ಆಪರೇಟಿವ್ ಸೊಸೈಟಿಯ ನೂತನ ಸಾಲಿನ ಅಧ್ಯಕ್ಷರಾಗಿ ನರಸಿಂಹ ಗಂಧದಮನೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತೃತೀಯ ಬಾರಿಗೆ ಈ ಸೊಸೈಟಿಯ ಅಧ್ಯಕ್ಷರಾಗಿ ಆಯ್ಕೆಯಾದ ಹಿರಿಮೆ ಇವರದ್ದಾಗಿದೆ.

ಶ್ರೀಯುತ ನರಸಿಂಹ ಅವರು ರಾಜ್ಯ ಜೆಡಿಎಸ್ ಕಾವ್ಯದರ್ಶಿಯಾಗಿ ಮತ್ತು ಜಿಲ್ಲಾ ಜೆಡಿಎಸ್ ವಕ್ತಾರರಾಗಿ ಹಾಗೂ ದುರ್ಗಿಗುಡಿ ಕನ್ನಡ ಸಂಘದ ಹಾಲಿ ಗೌರವಾಧ್ಯಕ್ಷರಾಗಿ, ದುರ್ಗಿಗುಡಿ ಮಿತ್ರಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

 

ನಗರದ ದುರ್ಗಿಗುಡಿ ಸೊಸೈಟಿಗೆ ಈ ಬಾರಿ ಚುನಾವಣೆ ನಡೆಯದಂತೆ ಎಲ್ಲ ಅಭ್ಯರ್ಥಿಗಳ ಮನವೊಲಿಸು ವಲ್ಲಿ ಹಾಗೂ ಅವಿರೋಧ ಆಯ್ಕೆ ಆಗುವಂತೆ ಪರಿಶ್ರಮಿಸಿದ ನರಸಿಂಹ ಗಂಧದಮನೆ ಮನೆ ಅವರು ಅದರಲ್ಲಿ ಯಶಸ್ಸು ಕಂಡಿದ್ದಾರೆ. ಹಿರಿಯ ನಿರ್ದೇಶಕ ಎನ್. ಉಮಾಪತಿ ಇನ್ನಿತರರ ಸಹಕಾರ ದೊಂದಿಗೆ ಚುನಾವಣೆ ನಡೆಯದಂತೆ ಮುಂಚೂಣಿ ಪಾತ್ರ ವಹಿಸಿದ್ದು ಒಟ್ಟಾರೆ ಚುನಾವಣೆ ಯಿಂದ ಆಗಬಹುದಾಗಿದ್ದ ಲಕ್ಷಾಂತರ ರೂ.ಗಳ ವೆಚ್ಚವನ್ನು ಉಳಿಸಿದ್ದಾರೆ. ಸರಳ ಸಜ್ಜನಿಕೆ ಹಾಗೂ

 

ಪ್ರಾಮಾಣಿಕ ವ್ಯಕ್ತಿತ್ವ ಹೊಂದಿರುವ ನರಸಿಂಹ ಅವರು ದುರ್ಗಿಗುಡಿ ಸೊಸೈಟಿಗೆ ತೃತೀಯ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಈ ಸಂದರ್ಭದಲ್ಲಿ ಅವರಿಗೆ ಆಡಳಿತ ಮಂಡಳಿ ನಿರ್ದೇಶಕರು ಮತ್ತು ಸದಸ್ಯರು ಅಭಿನಂದಿಸಿದ್ದಾರೆ.