ಶಿವಮೊಗ್ಗದಲ್ಲಿ ಕಲರ್ಸ್ ಕನ್ನಡದ ಗಿಚ್ಚಿ ಗಿಲಿಗಿಲಿ ಜೂನಿಯರ್ಸ್ ಆಡಿಷನ್
ಶಿವಮೊಗ್ಗ: ಕಲರ್ಸ್ ಕನ್ನಡ ವಾಹಿನಿಯ ʼಗಿಚ್ಚಿ ಗಿಲಿಗಿಲಿ ಜೂನಿಯರ್ಸ್ʼ ರಿಯಾಲಿಟಿ ಷೋಗಾಗಿ ಡಿಸೆಂಬರ್ 14ರಂದು ಬೆಳಗ್ಗೆ 10 ಗಂಟೆಗೆ ಶಿವಮೊಗ್ಗದ ಸವಳಂಗ ರಸ್ತೆಯಲ್ಲಿರುವ ಬಸವೇಶ್ವರ ನಗರದ 3ನೇ ಕ್ರಾಸ್‌ನಲ್ಲಿರುವ ಆಕ್ಸ್‌ಫರ್ಡ್ ಇಂಗ್ಲಿಷ್ ಸ್ಕೂಲ್‌ನ ಆವರಣದಲ್ಲಿ ಆಡಿಷನ್ ನಡೆಯಲಿದೆ. 5ರಿಂದ 12 ವರ್ಷ ವಯೋಮಿತಿಯ ಮಕ್ಕಳು ಈ ಆಡಿಷನ್‌ನಲ್ಲಿ ಭಾಗವಹಿಸಬಹುದು. ಆಯ್ಕೆಯಾದ ಮಕ್ಕಳು ʼಗಿಚ್ಚಿ ಗಿಲಿಗಿಲಿ ಜೂನಿಯರ್ಸ್ʼ ರಿಯಾಲಿಟಿ ಷೋದಲ್ಲಿ ಜನಪ್ರಿಯ ಟಿವಿ ಕಲಾವಿದರೊಂದಿಗೆ ಪಾಲ್ಗೊಳ್ಳಬಹುದು. ಅವರಿಗೆ ಅತ್ಯುತ್ತಮ ತರಬೇತಿಯನ್ನೂ ನೀಡಲಾಗುತ್ತದೆ.

