ಶಿವಮೊಗ್ಗ : ಶಿವಮೊಗ್ಗ ಹೌಸಿಂಗ್ ಕೋ-ಆಪರೇಟಿವ್ ಚುನಾವಣೆ : ಹೊಸಬರಿಗೆ ಈ ಭಾರಿ ಅವಕಾಶ ನೀಡುವಂತೆ ಎಸ್. ತಂಗರಾಜ್ ಮನವಿ…
ಸೊಸೈಟಿಯ ನಿರ್ದೇಶಕರ ಚುನಾವಣೆಯು ಜ.12 ರಂದು ನಡೆಯಲಿದ್ದು, ಈ ಚುನಾವಣೆಗೆ ಸಾಮಾನ್ಯ ವಿಭಾಗದಲ್ಲಿ ಸ್ಪರ್ಧೆ ಮಾಡಿರುವ ತಮನ್ನು ಬೆಂಬಲಿಸಿ, ಮತ ನೀಡುವಂತೆ ಅಭ್ಯರ್ಥಿ ಎಸ್. ತಂಗರಾಜ್ ಮನವಿ ಮಾಡಿದ್ದಾರೆ…
ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಯ ಸದಸ್ಯನಾಗಿ ಹಲವಾರು ವರ್ಷಗಳಿಂದ ಇದ್ದೇನೆ. ಅನೇಕ ಸಂಘ ಸಂಸ್ಥೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಅದೇ ಹಿನ್ನೆಲೆಯಲ್ಲಿ ಹೌಸಿಂಗ್ ಸೊಸೈಟಿ ನಿರ್ದೇಶಕರ ಸ್ನಾನಕ್ಕೆ ಸ್ಪರ್ಧೆ ಮಾಡಿದ್ದು, ನನ್ನ ಕ್ರಮ ಸಂಖ್ಯೆ 7, ಹಾಗೆಯೇ ಚಿಹ್ನೆ ರ ಬ್ಯಾಟ್ಸ್ ಮನ್. ಇದಕ್ಕೆ ನಿಮ್ಮ ಅಮೂಲ್ಯವಾದ ಮತ ನೀಡುವ ಮೂಲಕ ಗೆಲ್ಲಿಸುವಂತೆ ಮನವಿ ಮಾಡುತ್ತೇನೆ ಎಂದರು.
ಸುಮಾರು 100 ವರ್ಷ ಇತಿಹಾಸವುಳ್ಳ ಈ ಸೊಸೈಟಿಯಲ್ಲಿ 6,917 ಜನ ಸದಸ್ಯರಿದ್ದಾರೆ. 3,063 ಜನ ಅರ್ಹ ಮತದಾರ ರಿದ್ದಾರೆ. ಒಟ್ಟು 32 ಜನ ಅಭ್ಯರ್ಥಿಗಳು ಚುನಾವಣಾ ಕಣದ ಲಿದ್ದು, ಅತೀ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಆಸಕ್ತಿ ತೋರಿ ಬರುತ್ತಿದ್ದಾರೆ. ಆದರೆ ಇತ್ತೀಚೆಗೆ ಚುನಾವಣೆ ಹಣ ಆಮಿಷ ಗಳನ್ನು ಒಡ್ಡುತ್ತಿದ್ದು, ಮತದಾರರು ಆಮಿಷಗಳಿಗೆ ಒಳಗಾಗದೆ ಸೂಕ್ತ ಅಭ್ಯರ್ಥಿಯನ್ನು ಗೆಲ್ಲಿಸಿಕೊಡಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ..

