ಜೆಎನ್‌ಸಿಇ ಕಾಲೇಜಿನ ಎಂಸಿಎ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಪತ್‌ಕುಮಾರ್ ಎಸ್. ಅವರಿಗೆ ಕುವೆಂಪು ವಿವಿಯಿಂದ ಪಿಹೆಚ್ ಡಿ ಪದವಿ ಲಭಿಸಿದೆ. ಸಂಪತ್ ಕುಮಾರ್ ಅವರು ಮಂಡಿಸಿದ “ಆಟೋ ಮಿಷನ್ ಆಫ್ ಆನ್ಸರ್ ಸ್ಕ್ರಿಪ್ಟ್ ಎವಲೇಷನ್ ಯೂಸಿಂಗ್ ಮಿಷನ್ ಲರ್ನಿಂಗ್ ಅರ್ಪೋಚ್ ” ಪ್ರಬಂಧಕ್ಕೆ ಪಿಎಚ್‌ಡಿ ಪದವಿ ಲಭಿಸಿದ್ದು ಕುವೆಂಪು ವಿವಿಯ ಗಣಕ ವಿಭಾಗದ ಪ್ರಾಧ್ಯಾಪಕರಾದ ಡಾ. ಎಂ.ರವಿಕುಮಾರ್ ಅವರು ಇವರಿಗೆ ಮಾರ್ಗ ದರ್ಶಕ ರಾಗಿದ್ದರು. ಸಂಪತ್‌ಕುಮಾರ್ ಕುವೆಂಪು ವಿವಿಯ ಇಂಜಿನಿಯರ್ ಬಿ.ಸುರೇಶ್ ಹಾಗೂ ನಾಗರತ್ನರವರ ಪುತ್ರ.