ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ನೂತನ ಜಿಲ್ಲಾಧ್ಯಕ್ಷರಾಗಿ ಎಂ. ರಮೇಶ್ ಶಂಕರಘಟ್ಟ ರವರು ಅಧಿಕಾರ ಸ್ವೀಕಾರ…
ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಸಮಾವೇಶ ಮತ್ತು ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ನೂತನ ಜಿಲ್ಲಾಧ್ಯಕ್ಷರಾಗಿ ಎಂ.ರಮೇಶ್ ಶಂಕರಘಟ್ಟ ರವರು ಅಧಿಕಾರ ಸ್ವೀಕಾರ ಮಾಡಿದರು.

ಈ ಸಂದರ್ಭದಲ್ಲಿ ಸಚಿವ ಎಸ್ ಮಧು ಬಂಗಾರಪ್ಪ, ಎಂ ಎಲ್ ಸಿ ಬಲ್ಕೀಶ್ ಬಾನು, ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಆರ್ ಪ್ರಸನ್ನ ಕುಮಾರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಉಪಾಧ್ಯಕ್ಷರಾದ ಎಸ್ ಕೆ ಮರಿಯಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ ಶ್ರೀಕಾಂತ್ ರಾಜ್ಯ ಉಪಾಧ್ಯಕ್ಷರಾದ ಇಕ್ಕೇರಿ ರಮೇಶ್, ರಾಜ್ಯ ಸಂಚಾಲಕರಾದ ಜಿ.ಡಿ. ಮಂಜುನಾಥ್, ಹಾಗೂ ಕಾಂಗ್ರೆಸ್ ಪಕ್ಷದ ಪ್ರಮುಖರಾದ ಕಲಗೋಡು ರತ್ನಾಕರ್, ಡಾ. ಶ್ರೀನಿವಾಸ್ ಕರಿಯಣ್ಣ, ನಾಗರಾಜ್ ಕಂಕಾರಿ,ಎಚ್. ಪಾಲಾಕ್ಷಿ, ಎಸ್ ಪಿ ಶೇಷಾದ್ರಿ, ಆರ್ ಮೋಹನ್, ಉಮೇಶ್, ಸಂತೆ ಕಡೂರು ವಿಜಯಕುಮಾರ್, ವಿಶ್ವನಾಥ್ ಕಾಶಿ, ಡಾ. ಶರತ್ ಮರಿಯಪ್ಪ,ಬಸವರಾಜ್, ಕಲೀಮ್ ಪಾಷಾ, ಮಧುಸೂದನ್, ಜಿತೇಂದ್ರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು
