ಶ್ರೀಗಂಧ ಸಾಗಾಣಿಕೆ: ಯುವಕ ಸೆರೆ, ಇನ್ನೊಬ್ಬ ಪರಾರಿ

ಕ್ರೈಂ ನ್ಯೂಸ್ ರಾಜ್ಯ ಶಿವಮೊಗ್ಗ

ಶ್ರೀಗಂಧ ಸಾಗಾಣಿಕೆ: ಯುವಕ ಸೆರೆ, ಇನ್ನೊಬ್ಬ ಪರಾರಿ

ಶಿವಮೊಗ್ಗ : ಜಿಲ್ಲೆಯಲ್ಲಿ ಶ್ರೀಗಂಧ ಮರಗಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಯನ್ನು ಪೋಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ವ್ಯಾಪ್ತಿಯಲ್ಲಿ ನಿನ್ನೆ ಜೂನ್‌ 6ರಂದು ಅಕ್ರಮವಾಗಿ ಶ್ರೀಗಂಧ ಮರಗಳ ಕಡಿತಲೆ ಬಗ್ಗೆ ಇದೇ ಅರಣ್ಯ ವಲಯದಲ್ಲಿ ಮೊಕದ್ದಮೆ ದಾಖಲಾಗಿದೆ.
ಹೊಸನಗರ ತಾಲೂಕಿನ ಹೊಸಳ್ಳಿ ಗ್ರಾಮದ ನೆಲ್ಲಿಸರ ವಾಸಿ 25 ವರ್ಷದ ದಯಕುಮಾರ @ ದಯಾನಂದ ಬಿನ್‌ ಜೇನು ಕಲ್ಲಪ್ಪ ಎಂಬ ವ್ಯಕ್ತಿಯನ್ನು ದಸ್ತಗಿರಿ ಮಾಡಲಾಗಿದ್ದು ಮತೊಬ್ಬ ವ್ಯಕ್ತಿ ಹೊಸ ನಗರ ತಾಲೂಕಿನ ಕಾರಕ್ಕಿ ಗ್ರಾಮದ ಕೌಶಿಕ್‌ ಬಿನ್‌ ಪಾಪಣ್ಣ ಗೌಡ 30 ವರ್ಷದ ವ್ಯಕ್ತಿ ತಪ್ಪಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಸುಮಾರು 39.300ಕೆ.ಜಿ ತೂಕದ ಶ್ರೀಗಂಧವನ್ನು ವಶ ಪಡಿಸಿಕೊಂಡಿದ್ದು ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಅರಣ್ಯ ಸಂಚಾರಿದಳದ ಪಿಎಸ್‌ಐ ಶ್ರೀ ವಿನಾಯಕ ಕೆ ಮತ್ತು ಸಿಬ್ಬಂದಿ ಹಾಗೂ ಹೊಸನಗರ ವಲಯದ ವಲಯ ಅರಣ್ಯಾಧಿಕಾರಿಗಳಾದ, ಶ್ರೀ ಅನಿಲ್ ಕುಮಾರ್ ಎಸ್, ಶ್ರೀ ಮಂಜುನಾಥ, ಉಪ ವಲಯ ಅರಣ್ಯಾಧಿಕಾರಿ, ಶ್ರೀ ಭರತ್ ಕುಮಾರ್ ಗಸ್ತು ಅರಣ್ಯ ಪಾಲಕಹಾಗೂ ಸಿಬ್ಬಂದಿಯವರು ಭಾಗಿಯಾಗಿದ್ದಾರೆ.