ಈದ್ ಮಿಲಾದ್, ವಿದ್ಯುತ್ ದೀಪಾಲಂಕಾರ, ಸೆಲ್ಫಿಗೆ ಮುಗಿದಿದ್ದ ಸಮಾಜ ಬಾಂಧವರು…‎⁨

ರಾಜ್ಯ ಶಿವಮೊಗ್ಗ
ಶಿವಮೊಗ್ಗ : ಈದ್ ಮಿಲಾದ್ ಅಂಗವಾಗಿ ಶಿವಮೊಗ್ಗ ನಗರದ ವಿವಿಧ ವೃತ್ತ ಹಾಗೂ ಪ್ರಮುಖ ರಸ್ತೆಗಳು ವಿದ್ಯುತ್ ದೀಪಲಂಕಾರ ಹಾಗೂ ಹಸಿರು ಸ್ವಾಗತ ಕಾಮಾನುಗಳ ಮೂಲಕ ಈದ್ ಮಿಲಾದ್ ಮೆರವಣಿಗೆಯನ್ನು ಸ್ವಾಗತಿಸಲು ಸಿದ್ದವಾಗಿದೆ

 

ಜನಾಕರ್ಷಣೆಯ ಕೇಂದ್ರವಾದ ಅಮೀರ್ ಅಹ್ಮದ್ ಸರ್ಕಲ್ ನಲ್ಲಿ ಮೆಕ್ಕಾ, ಮದೀನಾ ಸೇರಿದಂತೆ ವಿವಿಧ ಅಲಂಕಾರಗಳು ಮುಸ್ಲಿಂ ಸಮಾಜ ಬಾಂಧವರ ಜನಾಕರ್ಷಣೆಯ ಕೇಂದ್ರವಾಗಿದೆ,

 

  1. ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಸಮಾಜದವರು ಹಾಗೂ ಸಾರ್ವಜನಿಕರು ಜಮಾಯಿಸಿ ಫೋಟೋ ವಿಡಿಯೋ ಹಾಗೂ ಸೆಲ್ಫಿ ತೆಗೆದುಕೊಳ್ಳುತ್ತಿರುವ ದೃಶ್ಯ ಕಂಡು ಬಂತು,
ಅಮೀರ್ ಅಹ್ಮದ್ ಕಾಲೋನಿ, ಟಿಪ್ಪು ನಗರ, ಕೆ.ಆರ್ ಪುರಂ ರಸ್ತೆ, ಬೈಪಾಸ್ ರಸ್ತೆ, ಸೇರಿದಂತೆ ಮುಸ್ಲಿಂ ಸಮಾಜ ಬಾಂಧವರಿರುವ ವಿವಿಧ ಬಡಾವಣೆಗಳಲ್ಲಿ ಹಬ್ಬದ ವಾತಾವರಣ ಅದ್ದೂರಿ ಅಲಂಕಾರದಲ್ಲಿ ರಂಗೆರಿತ್ತು….