ಈದ್ಗಾ ಮೈದಾನ ವಕ್ಫ್ ಸಂಸ್ಥೆಯ ಆಸ್ತಿ: ಸುನ್ನಿ ಜಾಮಿಯಾ ಮಸೀದಿ ಸ್ಪಷ್ಟನೆ
ಶಿವಮೊಗ್ಗ: ತಿಲಕ್‌ನಗರದಲ್ಲಿರುವ ಸುನ್ನಿ ಈದ್ಗಾ ಮೈದಾನ ಮುಸ್ಲಿಂ ಸಮುದಾಯದ ವಕ್ಸ್ ಆಸ್ತಿಯಾಗಿದ್ದು, ಕರ್ನಾಟಕದ ರಾಜ್ಯಪತ್ರ ಅಧಿಸೂಚನೆ 1965ರ ನೋಟಿಫಿಕೇಷನ್ ಸಂಖ್ಯೆ 288 ರ ತಅನ್ವಯ ವಕ್ಸ್ ಆಸ್ತಿ ಎಂದು ಆದೇಶವಾಗಿದೆ. ಮುನ್ಸಿಪಲ್ ಖಾತಾವನ್ನು ಹೊಂದಿದೆ ಎಂದು
ಗಾಂಧಿ ಬಜಾರನ ಮರ್ಕಜ್ ಸುನ್ನಿ ಜಾಮಿಯಾ ಮಸ್ಜಿದ್ ಸಮಿತಿ ಹೇಳಿದೆ.
ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದ
ಸಮಿತಿಯವರು ಮತ್ತು ಸಮುದಾಯದವರು ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಈ ಮೈದಾನವನ್ನು ಸಂರಕ್ಷಿಸಲು ಸಹಕರಿಸಬೇಕು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕೆಂದು ಕೋರಿದೆ.
ಸುನ್ನಿ ಈದ್ಗಾ ಮೈದಾನವು ಮರ್ಕಜಿ ಸುನ್ನಿ ಜಾಮೀಯಾ ಮಸೀದಿ, ಗಾಂಧಿ ಬಜಾರ್, ಶಿವಮೊಗ್ಗದ ಅಧೀನದಲ್ಲಿದೆ. ಮೈದಾನದ ಎಲ್ಲಾ ನಿರ್ವಹಣೆಯನ್ನು ಜಾಮಿಯಾ ಮಸೀದಿಯು ಮಾಡಿಕೊಂಡು ಬಂದಿದೆ. ಮೈದಾನದಲ್ಲಿ ಕೆಲವರು ಅನಧಿಕೃತವಾಗಿ ವಾಹನ ನಿಲುಗಡೆ ಮಾಡುತ್ತಿದ್ದಾರೆ. ಈಜಾಗದಲ್ಲಿ ಕೆಲವು ಕಿಡಿಗೇಡಿಗಳು ರಾತ್ರಿ ವೇಳೆ ಹಾಗೂ ರಜಾದಿನಗಳಲ್ಲಿ ಅನೈತಿಕ ಚಟುವಟಿಕೆಯ ತಾಣವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದೆ.
ಈ ಸ್ಥಳವು ಮುಸ್ಲಿಂ ಸಮುದಾಯಕ್ಕೆ ಪವಿತ್ರ ಸ್ಥಳವಾಗಿದ್ದು ಪ್ರತೀ ವರ್ಷ ಸ್ಥಳವನ್ನು ಸ್ವಚ್ಛಗೊಳಿಸಲು ಲಕ್ಷಾಂತರ ರೂಪಾಯಿ ಹಣ ವ್ಯಯವಾಗುತ್ತಿದೆ. ಇಲ್ಲಿನ ಅನೈತಿಕ ಚಟುವಟಿಕೆಯ ಬಗ್ಗೆ ಮಾಹಿತಿಯನ್ನು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನೆಯಾಗಿಲ್ಲ. ಆದ್ದರಿಂದ ಮರ್ಕಜೆ ಸುನ್ನಿ ಜಾಮೀಯಾ ಮಸೀದಿಯ ಸಮೀತಿಯು ಮೈದಾನದ ಸ್ವಚ್ಛತೆಯನ್ನು ಗಮನದಲ್ಲಿಟ್ಟುಕೊಂಡು ಕೆಲವು ಅಭಿವೃದ್ಧಿ ಕಾರ್ಯವನ್ನು ಮಾಡಲು ಹಾಗೂ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಲು ತೀರ್ಮಾನಿಸಿದೆ ಎಂದಿದ್ದಾರೆ.
ಆದರೆ ಮಾ. 01 ರಂದು ಕೆಲವು ಕಿಡಿಗೇಡಿಗಳು ಅತಿಕ್ರಮಣ ಪ್ರವೇಶ ಮಾಡಿ ವಕ್ಷ ಆಸ್ತಿಯನ್ನು ಸಾರ್ವಜನಿಕ ಆಸ್ತಿ ಎಂದು ತಪ್ಪು ಮಾಹಿತಿ ನೀಡಿ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಹುನ್ನಾರ ಮಾಡಿದ್ದಾರೆ. ಅವರ ವಿರುದ್ಧ ಆಡಳಿತ ಸಮೀತಿಯು ಕಾನೂನು ಕ್ರಮ ಕೈಗೊಳ್ಳಲಿದೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾರಕ್ಷಣಾಧಿಕಾರಿ ವಕ್ಫ್ ಸಂಸ್ಥೆಗಳ ಟಾಸ್ಕ್ ಫೋರ್ಸ್ ಮುಖ್ಯಸ್ಥರಾಗಿದ್ದಾರೆ. ಅವರು ಸುನ್ನಿ ಈದ್ಗಾ ಮೈದಾನದಲ್ಲಿ ತಾತ್ಕಾಲಿಕವಾಗಿ ವಾಹನ ನಿಲುಗಡೆಯನ್ನು ಸ್ಥಗಿತಗೊಳಿಸಿ, ಮೈದಾನವನ್ನು ಸಂರಕ್ಷಿಸಲು ಸಹಕರಿಸಸಬೇಕು ಎಂದು ಕೋರಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ಸೂಕ್ತ ನಿರ್ದೇಶನವನ್ನು ನೀಡಬೇಕೆಂದು ಮನವಿಯಲ್ಕಿ ವಿವರಿಸಿದ್ದಾರೆ .