ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಹೊನ್ನಳ್ಳಿ ರಸ್ತೆಯಲ್ಲಿ ಧ್ವಜಾರೋಹಣ
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ 5 ವರ್ಷಗಳಿಂದ ಸಾರ್ವಜನಿಕ ಧ್ವಜಸ್ತಂಬ ನಿರ್ವಹಣೆ ಕಾಣದೆ ಸೊರಗಿದ್ದು ಇದನ್ನು ಗಮನಿಸಿದ ತರವೇ ಸ್ವಾಭಿಮಾನಿ ಬಣ ತಂಡ ಅದನ್ನು ಮಹಾನಗರ ಪಾಲಿಕೆಯ ಸಿಬ್ಬಂದಿಗಳು ಹಾಗೂ ಕಾರ್ಯಕರ್ತರು ಪದಾಧಿಕಾರಿಗಳಿಂದ ಸ್ವಚ್ಛಗೊಳಿಸಿ ಧ್ವಜಸ್ತಂಭಕ್ಕೆ ಹಳದಿ ಕೆಂಪು ಬಣ್ಣ ಹಚ್ಚಿ ಕಟ್ಟೆಗೆ ಬಿಳಿ ಬಣ್ಣವನ್ನು ಹೊಡೆದು ಸ್ವಚ್ಛವಾಗಿ ಕಾಣುವಂತೆ ಮಾಡಿ ಅದಕ್ಕೆ ನಿವೃತ್ತ ಸೈನಿಕರು ಹಾಗೂ ಆರಕ್ಷಕ ಸಿಬ್ಬಂದಿಯರವರಿಂದ ಕನ್ನಡದ ಬಾವುಟ ಹಾರಿಸುವುದರ ಮುಖಾಂತರ ಮೆರಗು ತಂದು ಕನ್ನಡಾಂಬೆಯ ಭಾವಚಿತ್ರವನ್ನು ಇಟ್ಟು ಪೂಜೆ ಸಲ್ಲಿಸಿ ಸಾರ್ವಜನಿಕವಾಗಿ ಸಿಹಿ ಹಂಚಿ ನಿವೃತ್ತ ಸೈನಿಕರದ ರಮಾನಾಥ್ ರವರಿಗೆ ಸನ್ಮಾನಿಸಿ ಹಾಗೂ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆದ ನಾಗೇಶ್ ರವರಿಗೆ ಹಾಗೂ ಅವರ ಸಿಬ್ಬಂದಿ ವರ್ಗಕ್ಕೆ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ವೇದಿಕೆ ಜಿಲ್ಲಾಧ್ಯಕ್ಷರಾದ ಕಿರಣ್ ಕುಮಾರ್ ಎಚ್ಎಸ್ ಮಹಿಳಾ ಘಟಕದ ಅಧ್ಯಕ್ಷರಾದ ಕವಿತಾ ಸಿ ಜಿಲ್ಲಾ ಕಾರ್ಯದರ್ಶಿಯಾದ ರಾಮು ನಗರ ಪ್ರಧಾನ ಕಾರ್ಯದರ್ಶಿಯಾದ ಮಹಮ್ಮದ್ ಶಫಿ ನಗರ ಸಂಘಟನಾ ಕಾರ್ಯದರ್ಶಿಯಾದ ನಾಗರಾಜ್ ಕೆಪಿ ಗ್ರಾಮಾಂತರ ಘಟಕದ ಅಧ್ಯಕ್ಷರಾದ ಮಂಜುನಾಥ್ ಎಚ್ ಎನ್ ನೂರುಲ್ಲಾ ಖಾನ್ ಇರ್ಫಾನ್ ಸುರೇಶ್ ಮಹಿಳಾ ಘಟಕದ ಪದಾಧಿಕಾರಿಗಳಾದ ಜಿಲ್ಲಾ ಉಪಾಧ್ಯಕ್ಷರಾದ ಪದ್ಮ ಮಾಲತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಆರತಿ ತಿವಾರಿ ಅನು ಜ್ಯೋತಿ ಮುಂತಾದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು

