ಗಜಾನನ ಬಸ್- ಆಯಿಲ್ ಟ್ಯಾಂಕರ್ ಮುಖಾಮುಖಿ ಡಿಕ್ಕಿ: ಹಲವರಿಗೆ ಗಾಯ, ಆಸ್ಪತ್ರೆಗೆ ದಾಖಲು

ರಾಜ್ಯ ಶಿವಮೊಗ್ಗ
ಗಜಾನನ ಬಸ್- ಆಯಿಲ್ ಟ್ಯಾಂಕರ್ ಮುಖಾಮುಖಿ ಡಿಕ್ಕಿ: ಹಲವರಿಗೆ ಗಾಯ, ಆಸ್ಪತ್ರೆಗೆ ದಾಖಲು
ರಿಪ್ಪನ್‌ಪೇಟೆ : ಸಮೀಪದ ಕೋಡೂರು ಬಳಿ ಇವತ್ತು ಬೆಳಗ್ಗೆ ಅಪಘಾತವೊಂದು ಸಂಭವಿಸಿದೆ. ಘಟನೆಯಲ್ಲಿ ಕೆಲವರಿಗೆ ಗಾಯಗವಾಗಿದ್ದು, ಓರ್ವರಿಗೆ ಗಂಭೀರ ಪೆಟ್ಟುಗಳಾಗಿವೆ. ಗಜಾನನ ಖಾಸಗಿ ಬಸ್ ಮತ್ತು ಪೆಟ್ರೋಲ್ ಟ್ಯಾಂಕರ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಘಟನೆಯಲ್ಲಿ ಬಸ್ ಮುಂಭಾಗ ಜಖಂಗೊಂಡಿದೆ.
ಕೋಡೂರು ರಸ್ತೆಯಲ್ಲಿ ಗಜಾನನ ಬಸ್ ಮತ್ತು ಪೆಟ್ರೋಲ್ ಸಾಗಿಸುತ್ತಿದ್ದ ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾಗಿವೆ. ಪರಿಣಾಮ ಬಸ್​ ಜಖಂಗೊಡಿದ್ದು, ಬಸ್​ನಲ್ಲಿದ್ದ ವಿದ್ಯಾರ್ಥಿಗಳು ಸೇರಿದಂತೆ ಅನೇಕರಿಗೆ ಸಣ್ಣಪುಟ್ಟ ಪೆಟ್ಟು ಬಿದ್ದಿದೆ. ಅದೃಷ್ಟವಶಾತ್ ಯಾರಿಗೂ ಹೆಚ್ಚು ಅಪಾಯವಾಗಿಲ್ಲ. ಆದರೆ ಓರ್ವ ಮಹಿಳಾ ಪ್ರಯಾಣಿಕರ ತಲೆಗೆ ಪೆಟ್ಟು ಬಿದ್ದಿದ್ದರಿಂದ ಅವರ ಸ್ಥಿತಿ ಗಂಭೀರವಾಗಿದೆ. ಇನ್ನೂ ಸ್ಥಳೀಯರು ವಿಷಯ ತಿಳಿಯುತ್ತಲೆ ಸ್ಥಳಕ್ಕೆ ಬಂದು ಆಂಬುಲೆನ್ಸ್​ ಕರೆಸಿಕೊಂಡು ಗಾಯಾಗಳುಗಳನ್ನ ಹೊಸನಗರ ಆಸ್ಪತ್ರೆಗೆ ರವಾನಿಸಿದರು. ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಸಂಬಂಧ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.