ಸಾಹಿತಿ ಎಂ.ಸತ್ಯನಾರಾಯಣ ಗೆ ನಾ‌ ಡಿಸೋಜ ಸಾಹಿತ್ಯ ಪ್ರಶಸ್ತಿ

ರಾಜ್ಯ ರಾಷ್ಟ್ರೀಯ ಶಿವಮೊಗ್ಗ

ಸಾಹಿತಿ ಎಂ.ಸತ್ಯನಾರಾಯಣ ಗೆ ನಾ‌ ಡಿಸೋಜ ಸಾಹಿತ್ಯ ಪ್ರಶಸ್ತಿ

ಶಿವಮೊಗ್ಗ,ಮಾ.04 : ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಬೆಂಗಳೂರಿನ ಆನ್ವೇಷಣೆ ಸಾಂಸ್ಕ್ರತಿಕ ಅಕಾಡೆಮಿ(ರಿ) ಇವರ ವತಿಯಿಂದ ಸಾಗರದ ಹಿರಿಯ ಕವಿ, ಲೇಖಕ ಸಾಹಿತಿ, ಎಂ.ಸತ್ಯನಾರಾಯಣ ಸಾಗರ ಇವರ ಕಳೆದ 40 ವರ್ಷಗಳ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಇವರಿಗೆ ರಾಜ್ಯಮಟ್ಟದ ನಾ‌ ಡಿಸೋಜ ಸಾಹಿತ್ಯ ಪ್ರಶಸ್ತಿ ಯನ್ನು ನೀಡಿ ಸನ್ಮಾನಿಸಲಾಯಿತು.

ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ, ಡಾ.ಮೂಡ್ನಾಕೋಡುಚಿನ್ನಸ್ವಾಮಿ, ಸಾಹಿತಿ ಡಾ.ದೊಡ್ಡರಂಗೇಗೌಡ, ಚಿತ್ರನಟ ನಿರ್ದೇಶಕ ಸುಚೇಂದ್ರ ಪ್ರಸಾದ , ಖ್ಯಾತ ಕಾದಂಬರಿಕಾರ ಕೌಂಡಿನ್ಯ ಹಾಗು ಕತೆಗಾರರಾದ ಕೆ ಶ್ರೀಧರ್ ಸಮಾರಂಭದಲ್ಲಿ ಭಾಗಿಯಾಗಿದ್ದರು. ಸಂಸ್ಥೆಯ ಸಂಸ್ಥಾಪಕರಾದ ಭದ್ರಾವತಿ ರಾಮಾಚಾರಿ ಹಾಜರಿದ್ದರು.