ಅಲ್ಪಸಂಖ್ಯಾತರಿಗೆ ವಸತಿ ಯೋಜನೆ ಸಂವಿಧಾನ ವಿರೋಧಿ, ರಾಷ್ಟ್ರಭಕ್ತರ ಬಳಗ ಜೂನ್ 25 ರಂದು ಪ್ರತಿಭಟನೆ :ಯುವ ಮುಕಂಡ ಕೆ. ಇ. ಕಾಂತೇಶ್

ರಾಜ್ಯ ಶಿವಮೊಗ್ಗ

ಅಲ್ಪಸಂಖ್ಯಾತರಿಗೆ ವಸತಿ ಯೋಜನೆ ಸಂವಿಧಾನ ವಿರೋಧಿ, ರಾಷ್ಟ್ರಭಕ್ತರ ಬಳಗ ಜೂನ್ 25 ರಂದು ಪ್ರತಿಭಟನೆ :ಯುವ ಮುಕಂಡ ಕೆ. ಇ. ಕಾಂತೇಶ್

ಶಿವಮೊಗ್ಗ,ಜೂ.21 :  ಈ ಹಿಂದೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಳ ಅಭಿವೃದ್ಧಿಗೆ ಮೀಸಲಿಟ್ಟ ಸಾವಿರಾರು ಕೋಟಿ ಹಣವನ್ನು ಗ್ಯಾರಂಟಿ” ಯೋಜನೆಗೆ ಬಳಸಿಕೊಂಡು ಅನ್ಯಾಯ ಮಾಡಿದ ಸಿದ್ದರಾಮಯ್ಯ ಸರ್ಕಾರ ಈಗ ವಸತಿ ಯೋಜನೆಯ ಮನೆಗಳನ್ನು ಈ ಸಮುದಾಯದ ಜನರಿಂದ ಕಸಿದುಕೊಂಡು ಅಲ್ಪಸಂಖ್ಯಾತರಿಗೆ ವಿತರಿಸಲು ಹೊರಟಿದೆ ಸರ್ಕಾರದ ಸಂವಿಧಾನ ವಿರೋಧಿಯಾದ ತನ್ನ ಈ ನಿರ್ಧಾರವನ್ನು ಕೂಡಲೆ ಹಿಂಪಡೆಯಬೇಕು ಎಂಬ ಬೇಡಿಕೆಯನ್ನಿಟ್ಟು ರಾಷ್ಟ್ರಭಕ್ತರ ಬಳಗ ಜೂನ್ 25 ರಂದು ಪ್ರತಿಭಟನೆ ನಡೆಸಲಿದೆ.

ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಬಳಗದ ಯುವ ಮುಕಂಡ ಕೆ. ಇ. ಕಾಂತೇಶ್, ಬಳಗದ ಸ್ಥಾಪಕ ಕೆ.ಎಸ್.ಈಶ್ವರಪ್ಪನವರ ನೇತೃತ್ವದಲ್ಲಿ 25 ರ ಬುಧವಾರ ಬೆಳಿಗ್ಗೆ 10 ಗಂಟೆಗೆ ರಾಮಣ್ಣ ಶೆಟ್ಟಿ ಪಾರ್ಕ್‌ನಿಂದ ಶಿವಪ್ಪನಾಯಕ ವೃತ್ತದವರೆಗೆ ಬೃಹತ್ ಪ್ರತಿಭಟನೆಯನ್ನು ನಡೆಸಲಾಗುವುದು. ಇದು ಸರ್ಕಾರಕ್ಕೆ ಮೊದಲ ಎಚ್ಚರಿಕೆಯಾಗಿದ್ದು ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದರು.