ಆರ್.ಮೋಹನ್ ಕುಮಾರ್ ಜನ್ಮದಿನದ ಸಂಭ್ರಮ..
ಶಿವಮೊಗ್ಗ : ಕರ್ನಾಟಕ ರಾಜ್ಯಸರ್ಕಾರಿ ಸರ್ಕಾರಿ ನೌಕರರ ಸಂಘದ ಶಿವಮೊಗ್ಗ ಜಿಲ್ಲಾಧ್ಯಕ್ಷರು, ರಾಜ್ಯ ಸಂಘದ ಹಿರಿಯ ಉಪಾಧ್ಯಕ್ಷರು ಹಾಗೂ ರಾಜ್ಯ ಸರ್ಕಾರಿ ನೌಕರರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಆರ್. ಮೋಹನ್ ಕುಮಾರ್ ಅವರ ಜನ್ಮ ದಿನವನ್ನು ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯಧ್ಯಕ್ಷ ಡಾ. ಸಿ.ಎ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.ಕಾರ್ಯದರ್ಶಿ ಆರ್ ಪಾಪಣ್ಣ, ಕೆ.ಆರ್ ರಾಮಪ್ಪ, ಖಜಾಂಚಿ ಸತ್ಯನಾರಾಯಣ, ರಾಜ್ಯ ಪರಿಷತ್ ಸದಸ್ಯರಾದ ಎನ್.ಎಂ.ರಂಗನಾಥ್ ಗೌರವಾಧ್ಯಕ್ಷರಾದ ಟಿ.ಕೊಟ್ರೇಶ್, ಭದ್ರಾವತಿ ತಾಲ್ಲೂಕು ಸಂಘದ ಅಧ್ಯಕ್ಷ ಬಿ.ಸಿದ್ದಬಸಪ್ಪ, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಡಿ.ಎಸ್ ಗುರುಮೂರ್ತಿ, ಡಿ.ಹೆಚ್.ಒ ನಟರಾಜ್, ನೌಕರರ ಸಂಘದ ಹಿರಿಯ ಉಪಾಧ್ಯಕ್ಷ ಜಿ.ಎಂ ಜಿ.ಎಚ್ ಅಶೋಕ್, ಮಾಜಿ ಕಾರ್ಯದರ್ಶಿ ಡಿ.ಟಿ ಕೃಷ್ಣಮೂರ್ತಿ,ಎಂ.ಆರ್ ಧರ್ಮಶೀಲ, ಪುತ್ರಿ ಎಸ್.ಎಂ. ನಾಗದೀಪ, ಅಂತೋಣಿ ರಾಜು, ಡಿ.ವಿ.ಸತೀಶ್ಸೇರಿದಂತೆ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಜಿಲ್ಲೆಯ ಸರ್ಕಾರಿ ಅಧಿಕಾರಿ-ನೌಕರರು ಉಪಸ್ಥಿತರಿದ್ದರು.





