ಧರ್ಮಸ್ಥಳದಲ್ಲಿ ಸಾವುಗಳ ಪ್ರಕರಣ: ನ್ಯಾಯಯುತ ತನಿಖೆಯಾಗಲಿ, ಎಸ್ ಐ ಟಿ ಗೆ ಸರ್ಕಾರ ಸ್ವಾತಂತ್ರ್ಯ ನೀಡಬೇಕು: ಕೆ.ಪಿ ಶ್ರೀಪಾಲ್
ಶಿವಮೊಗ್ಗ : ಅನಾಮಧೇಯ ವ್ಯಕ್ತಿಯೋರ್ವ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂಬ ದೂರಿನ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್ಐಟಿ ತನಿಖೆಗೆ ಆದೇಶಿಸಿರುವುದಕ್ಕೆ ವಕೀಲ, ಜನಪರ ಹೋರಾಟಗಾರ ಕೆ.ಪಿ. ಶ್ರೀಪಾಲ್ ಸ್ವಾಗತಿಸಿದ್ದಾರೆ.

