2 ನೇ ಭಾರಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ಸಿ.ಎಸ್. ಕ್ಷಡಾಕ್ಷರಿ ಯವರು ಆಯ್ಕೆಯಾಗುವ ಮೂಲಕ ರಾಜಕೀಯ ತಂತ್ರ – ಕುತಂತ್ರ ಮೀರಿ ವಿಜಯ ಸಾಧಿಸಿದ್ದಾರೆ,
ತೀವ್ರ ಕುತೂಹಲ ಮೂಡಿಸಿದ್ದ ರಾಜ್ಯ ಸರ್ಕಾರಿ ನೌಕರರ ಚುನಾವಣೆಯಲ್ಲಿ ಸಿ.ಎಸ್ ಕ್ಷಡಾಕ್ಷರಿ ಯವರು 507 ಮತಗಳನ್ನು ಪಡೆದರು , ಪ್ರತಿ ಸ್ಪರ್ದಿ ಅಭ್ಯರ್ಥಿ ಬಿ.ಪಿ . ಕೃಷ್ಣೇಗೌಡ 442 ಮತಗಳನ್ನು ಪಡೆದರು, ಅಂತಿಮವಾಗಿ ಸಿ.ಎಸ್ ಕ್ಷಡಾಕ್ಷರಿ 65 ಮತಗಳ ಅಂತರದಲ್ಲಿ ವಿಜಯಮಾಲೆ ತಮ್ಮದಾಗಿಸಿ ಕೊಂಡಿದ್ದಾರೆ.
ಖಜಾಂಚಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶಿವರುದ್ರಯ್ಯ 485 ಮತಗಳನ್ನು ಪಡೆದರೆ, ತಮ್ಮ ಪ್ರತಿಸ್ಪರ್ದಿ ನಾಗರಾಜ ಜುಮಣ್ಣ್ಣನವರ 467 ಮತಗಳನ್ನು ಪಡೆದರು
ಅಂತಿಮವಾಗಿ ಶಿವರುದ್ರಯ್ಯ 18 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ ..


