ಚಿತ್ರದುರ್ಗ : ಭೀಕರ ಬಸ್ ಅಪಘಾತ ,60 ಮಕ್ಕಳ ಜೀವ ಉಳಿಸಿದ ರಿಯಲ್ ಹೀರೋ ಸಚಿನ್…

ರಾಜ್ಯ ರಾಷ್ಟ್ರೀಯ
ಚಿತ್ರದುರ್ಗ : ಭೀಕರ ಬಸ್ ಅಪಘಾತ ,60 ಮಕ್ಕಳ ಜೀವ ಉಳಿಸಿದ ರಿಯಲ್ ಹೀರೋ ಸಚಿನ್…
ಚಿತ್ರದುರ್ಗದ ಗೋರ್ಲತ್ತು ಬಳಿ ನಡೆದ ಭೀಕರ ಬಸ್ ಅಪಘಾತದಲ್ಲಿ ಹಾಸನ ಮೂಲದ ಚಾಲಕ ಸಚಿನ್ ನಿಜವಾದ ಹೀರೋ ಆಗಿ ಹೊರಹೊಮ್ಮಿದ್ದಾರೆ. ಟಿ. ದಾಸರಹಳ್ಳಿಯಿಂದ 60 ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ಯುತ್ತಿದ್ದ ಇವರು, ತಮ್ಮ ಬಸ್ ಅನ್ನು ಸೀಬರ್ಡ್ ಬಸ್ ಓವರ್‌ಟೇಕ್ ಮಾಡಿ ಲಾರಿಗೆ ಡಿಕ್ಕಿ ಹೊಡೆದಾಗಲೂ ಧೈರ್ಯಗೆಡದೆ ತಮ್ಮ ವಾಹನವನ್ನು ನಿಯಂತ್ರಿಸಿದರು.
ತಮಗೆ ತಲೆಗೆ ಗಾಯವಾಗಿದ್ದರೂ ಲೆಕ್ಕಿಸದೆ, ಮೊದಲು ಶಾಲಾ ಮಕ್ಕಳ ಸುರಕ್ಷತೆ ಖಚಿತಪಡಿಸಿಕೊಂಡು, ನಂತರ ಹೊತ್ತಿ ಉರಿಯುತ್ತಿದ್ದ ಸೀಬರ್ಡ್ ಬಸ್‌ನಲ್ಲಿದ್ದ ಪ್ರಯಾಣಿಕರ ರಕ್ಷಣೆಗೆ ಧಾವಿಸಿ ಮಾನವೀಯತೆ ಮೆರೆದಿದ್ದಾರೆ.