ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗಲೆಂದು , ದೇವಿಗೆ ವಿಶೇಷ ಪೂಜೆ, ವಯೋವೃದ್ಧರಿಗೆ ಓದಿಕೆ ವಿತರಣೆ

ರಾಜಕೀಯ ರಾಜ್ಯ ಶಿವಮೊಗ್ಗ
ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗಲೆಂದು , ದೇವಿಗೆ ವಿಶೇಷ ಪೂಜೆ, ವಯೋವೃದ್ಧರಿಗೆ ಓದಿಕೆ ವಿತರಣೆ-  ಕೆಪಿಸಿಸಿ ಕಾರ್ಯದರ್ಶಿ ಕೆ ದೇವೇಂದ್ರಪ್ಪನವರ ನೇತೃತ್ವದಲ್ಲಿ
ಎಳ್ಳಮಾವಾಸ್ಯೆ ಪ್ರಯುಕ್ತ. ಶೀಘ್ರದಲ್ಲೇ ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್  ಅವರು ಮುಖ್ಯಮಂತ್ರಿ ಆಗಲು ಇರುವ ಅಡೆತಡೆಗಳನ್ನು ಹಾಗೂ ಅವರು ಮುಖ್ಯಮಂತ್ರಿ ಆಗಲು ಅಡ್ಡಿಪಡಿಸುತ್ತಿರುವ ಶಾಸಕರುಗಳು ಮತ್ತು ಕಾಂಗ್ರೆಸ್ ಮುಖಂಡರಿಗೆ ದೇವರು ಸದ್ಬುದ್ದಿ ಕೊಡಲಿ, ಯಾವುದೇ. ಕೊಟ್ಟ ಮಾತಿನಂತೆ ಅಧಿಕಾರ ಅಸ್ತಾಂತರಿಸಿ ಯಾವುದೇ ಆತಂಕವಿಲ್ಲದೆ ಶೀಘ್ರದಲ್ಲೇ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಯಾಗಿ ಕರ್ನಾಟಕ ರಾಜ್ಯದ ಜನರ ಉತ್ತಮ ಸೇವೆ ಮಾಡಲೆಂದು ಶಿವಮೊಗ್ಗ ಕಾಂಗ್ರೆಸ್ ಮುಖಂಡರಿಂದ ಕೆಪಿಸಿಸಿ ಕಾರ್ಯದರ್ಶಿ ಕೆ ದೇವೇಂದ್ರಪ್ಪನವರ ನೇತೃತ್ವದಲ್ಲಿ ಶಕ್ತಿ ದೇವತೆ, ಶಿವಮೊಗ್ಗದ ಗ್ರಾಮ ದೇವತೆ ಕೋಟೆ ಮಾರಿಕಾಂಬ ದೇವಿಗೆ ವಿಶೇಷ ಪೂಜೆ ಸಲ್ಲಿಸಿ .
ಶಿವಮೊಗ್ಗ ನಗರದಲ್ಲಿ ಅತಿ ಚಳಿ ಇರುವ ಪ್ರಯುಕ್ತ ದೇವಸ್ಥಾನದ ಮುಂದೆ ಭಿಕ್ಷೆ ಬೇಡುವ ವಯೋವೃದ್ಧರಿಗೆ. ಹಾಗೂ ದೇವರನ್ನು ಹೊತ್ತ ಜೋಗಿತಿಯರಿಗೆ. ಇಂದು ಓದಿಕೆ ಹಾಕಿ. ಕಾಣಿಕೆ ನೀಡಲಾಯಿತು.. ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ನ ಹಿಂದುಳಿದ ವರಗಳ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ ಎಂ ಹರ್ಷ. ಜಿಲ್ಲಾ ಕಾರ್ಮಿಕ ವಿಭಾಗಗಳ ಕಾರ್ಯ ಅಧ್ಯಕ್ಷರಾದ ಕುಮಾರ್ ಜಿಲ್ಲಾ ಕಾಂಗ್ರೆಸ್ ಮುಖಂಡರದ ಸ್ಟೆಲಾ. ಕವಿತಾ ರಾಘವೇಂದ್ರ ಮಾರ್ಟಿನ್ ಮಾಲತೇಶ್ ಧ್ರುವ ಕುಮಾರ್ ನವಿಲೇ ಸಂತೋಷ್. ಕಾಂಗ್ರೆಸ್ ಮುಖಂಡರಾದ ಪ್ರಭು ಮುಂತಾದವರು ಹಾಜರಿದ್ದರು