ಎಚ್ ಎಸ್ ವಿ ಯವರ. ಕವಿತೆ ನಾಟಕ ಪ್ರಬಂಧ ಕಾದಂಬರಿ ಮಕ್ಕಳ ಸಾಹಿತ್ಯ ಇಂದಿಗೂ ಪ್ರಸ್ತುತ
ಸುಗಮ ಸಂಗೀತ ಕ್ಷೇತ್ರಕ್ಕೆ ಎಚ್ಎಸ್ ವೆಂಕಟೇಶ್ ಮೂರ್ತಿಯವರ ಕೊಡುಗೆ ಅಪಾರ. . ಜಯಶ್ರೀ ಶ್ರೀಧರ್.
ಕಲಾ ಕ್ಷೇತ್ರದಲ್ಲಿ ಚಲನಚಿತ್ರ ಹಾಗೂ ಧಾರವಾಹಿಗಳಿಗೆ ಸಂಭಾಷಣೆಯನ್ನು ಬರೆಯುವುದರಲ್ಲಿ ಪ್ರಮುಖ ಪಾತ್ರ ವಹಿಸಿದ ಹೆಚ್ಎಸ್ ವೆಂಕಟೇಶ್ ಮೂರ್ತಿಯವರ ಕಲಾಸೇವೆ ಮರೆಯವಂತಿಲ್ಲ ಅವರ ಕವನ ಕವಿತೆಗಳು ಇಂದಿಗೂ ಸಹ ಪ್ರಸ್ತುತ ಎಲ್ಲಾ ವರ್ಗದವರಿಗೂ ಸಹ ವಿಶೇಷ ಕವನಗಳನ್ನು ರಚಿಸುವುದರ ಸುಗಮ ಸಂಗೀತ ಕ್ಷೇತ್ರವನ್ನು ಸದೃಢಗೊಳಿಸಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಎಂದು ಸುಗಮ ಸಂಗೀತ ಪರಿಷತ್ತಿನ ನಿರ್ದೇಶಕರು ಹಾಗೂ ಆಕಾಶವಾಣಿ ಕಲಾವಿದರಾದ ಶ್ರೀಮತಿ ಜಯಶ್ರೀ ಶ್ರೀಧರ್ ಅವರು ಅಭಿಮತ ವ್ಯಕ್ತಪಡಿಸಿದರು,
ಅವರು ಇಂದು ನಗರದ ಮಧುರ ಪ್ಯಾರಡೈಸ್ ಸಭಾಂಗಣದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ ಶಿವಮೊಗ್ಗ ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್. ಭಾವಗಾನ ಶಿವಮೊಗ್ಗ. ನಾದಶ್ರೀ ಸುಗಮ ಸಂಗೀತ ಶಾಲೆ. ಹಾಗೂ ತರಂಗಿಣಿ ಸಂಗೀತ ಶಾಲೆ ಶಿವಮೊಗ್ಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಇಂದು ಕೀರ್ತಿಶೇಶ ಕವಿ ಡಾಕ್ಟರ್ ಎಚ್ಎಸ್ ವೆಂಕಟೇಶ್ ಮೂರ್ತಿಯವರ. ನಾಲ್ಕು ದಿನದ ಬಾಳಿಗೆ ಇರಲಿ ಹಾಲು ಹೋಳಿಗೆ. ನುಡಿಗಾನ ನಮನ ಕಾರ್ಯಕ್ರಮ ವನ್ನು ಎಚ್ ಎಸ್ ವಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮುಖಾಂತರ ಉದ್ಘಾಟಿಸಿದರು.
