ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲೆಂದು ಕೆ.ದೇವೇಂದ್ರಪ್ಪನವರಿಂದ ಪ್ರಾರ್ಥನೆ, ಆರ್ಥಿಕವಾಗಿ ದುರ್ಭಲರಿಗೆ ಹೊದಿಕೆ ವಿತರಣೆ

ರಾಜ್ಯ ಶಿವಮೊಗ್ಗ
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲೆಂದು ಕೆ.ದೇವೇಂದ್ರಪ್ಪನವರಿಂದ ಪ್ರಾರ್ಥನೆ, ಆರ್ಥಿಕವಾಗಿ ದುರ್ಭಲರಿಗೆ ಹೊದಿಕೆ ವಿತರಣೆ..
ಕಳೆದ 15ದಿನಗಳಿಂದ ಶಿವಮೊಗ್ಗ ನಗರದಲ್ಲಿ ವಿಪರೀತ ಚಳ್ಳಿ ಇರುವುದರಿಂದ ಇಂದು ದೇವಸ್ಥಾನದ ಮುಂದೆ ಹೂವು ಮಾರುವ ಹಾಗೂ ಆರ್ಥಿಕವಾಗಿ ದುರ್ಭಲಾರಿಗೆ.. ಇಂದು  ಶ್ರೀ ರಾಘವೇಂದ್ರ ಸ್ವಾಮಿ ಮಠದ ಮುಂದೆ ಇರುವವರಿಗೆ ಹೊದಿಕೆ (ಬೆಡ್ಶೀಟ್ ) ಒದಿಸಲಾಯಿತು.. ಇದಕ್ಕೂ ಮುನ್ನ ಮಠದಲ್ಲಿ. ಆರಾಧ್ಯ ದೇವ ಶ್ರೀ ರಾಘವೇಂದ್ರ ಸ್ವಾಮಿ ಅವರಿಗೆ ಪೂಜೆ ಸಲ್ಲಿಸಿ ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯಕ್ಕೆ ಮುಖ್ಯಮಂತ್ರಿ ಆಗಿ ಡಿಕೆ ಶಿವಕುಮಾರ್ ರವರು ಯಾವುದೇ ಅಡ್ಡಿ, ತಡೆಗಳಿಲ್ಲದೆ ರಾಜ್ಯದ ಮುಖ್ಯಮಂತ್ರಿ ಆಗಿ ಜನರ ಸೇವೆ ಮಾಡಲು. ರಾಯರು ಆಶೀರ್ವದಿಸಬೇಕೆಂದು ಸಂಕಲ್ಪ ಮಾಡಲಾಯಿತು..
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಕೆ ದೇವೇಂದ್ರಪ್ಪನವರು.   ಕಾರ್ಮಿಕ ವಿಭಾಗದ ಮಹಿಳಾ ಅಧ್ಯಕ್ಷ ಕವಿತಾ ರಾಘವೇಂದ್ರ.. ವಿದ್ಯಾರ್ಥಿ ಹಾಗೂ ಯುವ ಕಾಂಗ್ರೆಸ್ ಮುಖಂಡ ಸಿಜಿ ಮಧುಸೂದನ್, ರಾಜ್ಯ ಹಿಂದುಳಿದ ವರ್ಗಗಳ ವಿಭಾಗದ ಪ್ರಧಾನ ಕಾರ್ಯದರ್ಶಿ ಹರ್ಷ ಬಿ ಎಂ.. ಕಾರ್ಮಿಕ ವಿಭಾಗದ ಕಾರ್ಯಾಧ್ಯಕ್ಷ ಫ್ಲವರ್ ಕುಮಾರ್.. ಮುಂತಾದವರು ಹಾಜರಿದ್ದರು