ವಿಶೇಷ ಆಕರ್ಷಣೆಯ ಮತ್ಸ್ಯಕನ್ಯೆಯರ ಶಿವಮೊಗ್ಗ ಉತ್ಸವ -2025 ಕ್ಕೆ ಚಾಲನೆ
ಶಿವಮೊಗ್ಗದ ಅಲ್ಲಮ ಪ್ರಭು ಬಯಲು (ಫ್ರೀಡಂ ಪಾರ್ಕ್) ನಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿರುವ ಮತ್ಸ್ಯ ಕನ್ಯೆಯರ ಶಿವಮೊಗ್ಗ ಉತ್ಸವ 2025 ರ ಕಾರ್ಯಕ್ರಮವನ್ನು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಉದ್ಘಾಟಿಸಿ ಶುಭ ಹಾರೈಸಿದರು ,

45 ದಿನಗಳು ಈ ಉತ್ಸವ ನೆಡೆಯಲಿದ್ದು , ಮೀನಿನ ಲೋಕವೇ ಇಲ್ಲಿ ಅನಾವರಣಗೊಂಡಿದೆ , ಜೊತೆಗೆ ವಿವಿಧ ಬಗೆಯ ಆಹಾರ ಮೇಳ, ಮನೋರಂಜನೆಯ ಆಟಿಕೆಗಳು , ಗೇಮ್ಸ್ ಸೇರಿದಂತೆ ಅನೇಕ ಬಗೆಯ ಉತ್ಪನ್ನಗಳು ನೋಡುಗರ ಮನ ಸೂರೆಗೊಳ್ಳಲಿದೆ, ಪ್ರತಿದಿನ ಸಂಜೆ 4 ಗಂಟೆಯಿಂದ 9 ಗಂಟೆಯವರೆಗೆ ಮೇಳ ನಡೆಯಲಿದ್ದು ಇದರ ಸದುಪಯೋಗ ವನ್ನು ಶಿವಮೊಗ್ಗ ಜನತೆ ಪಡೆಯಬೇಕೆಂದು ಮೇಳದ ಮುಖ್ಯ ಕಾರ್ಯ ನಿವಾಹಕರಾದ ಚೈತನ್ಯ ಮಾಸ್ತಿ ಅಯ್ಯಂಗಾರ್ ಮನವಿ ಮಾಡಿದರು..
