ಶಿವಮೊಗ್ಗ: ತೀರ್ಥಹಳ್ಳಿಯ ವಿದ್ಯಾರ್ಥಿನಿ ದೀಕ್ಷಾ ಅವರು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 600ಕ್ಕೆ 599 ಅಂಕಗಳನ್ನು ಪಡೆದು ರಾಜ್ಯಕ್ಕೆ ಮೊದಲ ಸ್ಥಾನ…

ರಾಜ್ಯ ರಾಷ್ಟ್ರೀಯ ಶಿವಮೊಗ್ಗ

ಶಿವಮೊಗ್ಗ: ತೀರ್ಥಹಳ್ಳಿಯ ವಿದ್ಯಾರ್ಥಿನಿ ದೀಕ್ಷಾ ಅವರು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 600ಕ್ಕೆ 599 ಅಂಕಗಳನ್ನು ಪಡೆದು ರಾಜ್ಯಕ್ಕೆ ಮೊದಲ ಸ್ಥಾನ…

ಶಿವಮೊಗ್ಗ: ಜಿಲ್ಲೆಯ  ತೀರ್ಥಹಳ್ಳಿ ತಾಲೂಕಿನ ಮೇಲಿನಕುರುವಳ್ಳಿಯ ವಾಗ್ದೇವಿ ಪಿಯು ಕಾಲೇಜಿನ ವಿದ್ಯಾರ್ಥಿನಿ ದೀಕ್ಷಾ ಅವರು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 600ಕ್ಕೆ 599 ಅಂಕಗಳನ್ನು ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ್ದಾರೆ.

ದೀಕ್ಷಾ ಅವರ ತಂದೆ ರಾಘವೇಂದ್ರ ಕಲ್ಕೂರ್ ಮೇಗರವಳ್ಳಿಯಲ್ಲಿ ಶಿಕ್ಷಕರು. ತಾಯಿ ಉಷಾ ತೀರ್ಥಹಳ್ಳಿಯ ಬಾಲಕಿಯರ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಗಳು ರಾಜ್ಯಕ್ಕೆ ಟಾಪರ್ ಅಗಿದ್ದಕ್ಕೆ ಕುಟುಂಬದಲ್ಲಿ ಸಂತಸ ಮನೆ ಮಾಡಿದ್ದು, ಸಿಹಿ ತಿನ್ನಿಸಿ ಹರ್ಷ ವ್ಯಕ್ತಪಡಿಸಿದರು.

ಈ ಬಗ್ಗೆ ಮಾತನಾಡಿದ ದೀಕ್ಷಾ, “590ಕ್ಕೂ ಹೆಚ್ಚು ಅಂಕ ಬರಬಹುದೆಂಬ ನಿರೀಕ್ಷೆ ಇತ್ತು. ಆದರೆ, 599 ಅಂಕ ಬರುತ್ತದೆ ಎಂದು ಅಂದುಕೊಂಡಿರಲಿಲ್ಲ. ನಾನು ಯಾವುದೇ ಟ್ಯೂಷನ್​ಗೆ ಹೋಗಿಲ್ಲ. ಕಾಲೇಜಿನಲ್ಲೇ ಚೆನ್ನಾಗಿ ಪಾಠ ಹೇಳಿಕೊಡುತ್ತಿದ್ದರು. ಕಾಲೇಜಿನ ಪಾಠ ಬಿಟ್ಟು ಬೇರೇನೂ ಮಾಡಿಲ್ಲ. ಎಕ್ಸಾಂ ಹತ್ತಿರ ಬಂದಾಗ ಓದುತ್ತಿದ್ದೆ. ಮುಂದೆ ಕಂಪ್ಯೂಟರ್‌ ಇಂಜಿನಿಯರಿಂಗ್ ಮಾಡಬೇಕೆಂಬ ಬಯಕೆ ಇದೆ” ಎಂದು ತಿಳಿಸಿದರು.

ತಾಯಿ ಉಷಾ ಅವರು ಮಾತನಾಡಿ, “ಮಗಳು ಎಕ್ಸಾಂ ಬಂದಾಗ ಸುಮಾರು 7-8 ಗಂಟೆ ಪ್ರತಿ ದಿನ‌ ಓದುತ್ತಿದ್ದಳು. ಬೇರೆ ಯಾವುದೇ ಟ್ಯೂಷನ್​ಗೆ ಹೋಗಿಲ್ಲ. ಕಾಲೇಜಿನಲ್ಲಿಯೇ ಚೆನ್ನಾಗಿ ಪಾಠ ಹೇಳಿಕೊಡುತ್ತಿದ್ದರು. ತೀರ್ಥಹಳ್ಳಿಯಂತಹ ಪ್ರದೇಶದಲ್ಲಿ ವಾಗ್ದೇವಿ ಪಿಯು ಕಾಲೇಜು ಉತ್ತಮವಾಗಿದೆ” ಎಂದರು.‌