ಕಸದ ಡಂಪಿಂಗ್ ಯಾರ್ಡ್ ಗೆ ಅನಿರೀಕ್ಷಿತ ಭೇಟಿ ನೀಡಿದ ಉಪ ಲೋಕಾಯುಕ್ತರು..

ರಾಜ್ಯ ರಾಷ್ಟ್ರೀಯ ಶಿವಮೊಗ್ಗ

ಕಸದ ಡಂಪಿಂಗ್ ಯಾರ್ಡ್ ಗೆ ಅನಿರೀಕ್ಷಿತ ಭೇಟಿ ನೀಡಿದ ಉಪ ಲೋಕಾಯುಕ್ತರು..

ಶಿವಮೊಗ್ಗ : ಉಪಲೋಕಾಯುಕ್ತ ಫಣೀಂದ್ರ ರವರ ನಗರ ಪರಿಕ್ರಮ ಇಂದು ಸಹ ಮುಂದುವರೆದಿದೆ. ಬೆಳ್ಳಂಬೆಳಗ್ಗೆ ಕಸದ ಡಂಪಿಂಗ್ ಯಾರ್ಡ್ ಗೆ ಅನಿರೀಕ್ಷಿತ ಭೇಟಿ ನೀಡಿದ ಉಪ ಲೋಕಾಯುಕ್ತರು ಕಸದ ಡಂಪಿಂಗ್ ಯಾರ್ಡ್ ಬಗ್ಗೆ ನಮಗೆ ಬಹಳಷ್ಟು ದೂರುಗಳು ಬಂದಿದ್ದವು ಕಸದ ವಿಲೇವಾರಿ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ ಎಂದ ದೂರಿನ ಹಿನ್ನಲೆ ಪರಿಶೀಲನೆಗೆ ಬಂದಿದ್ದೇವೆ.
ಕಸದ ಸಂಸ್ಕರಣೆ ಬಗ್ಗೆ ಇಲ್ಲಿನ ಸುತ್ತಮುತ್ತಲಿನ ಜನರಿಗೆ ಸೊಳ್ಳೆ ನೊಣಗಳ ಕಾಟ ಹೆಚ್ಚಾಗುತ್ತಿದೆ ಎಂಬ ಮಾಹಿತಿ ದೊರಕಿದೆ. ಕಸ ಹೋಗುವ ಕಾಲುವೆ ಮುಚ್ಚಲಾಗಿದೆ ಕಾಲುವೆ ಮಳೆಗಾಲದಲ್ಲಿ ಮಾತ್ರ ತೆರವು ಮಾಡಲಾಗುತ್ತಿದೆ ಎಂಬ ದೂರು ಬಂದಿದೆ ಅದನ್ನು ಪರಿಶೀಲನೆ ನಡೆಸಿದ್ದೇನೆ ಕಸ ಹೋಗುವ ಕಾಲುವೆ ಮಳೆಗಾಲದಲ್ಲಿ ಹೇಗೆ ಇರಲಿದೆ ಎಂಬುದರ ಬಗ್ಗೆ ಫೋಟೋ ವೀಡಿಯೋ ಮಾಡಿ ನಮಗೆ ಕಳಿಸಲು ಸೂಚನೆ ನೀಡಿದ್ದೇನೆ. ಕಸದ ಕಾಲುವೆ ಬೇರೆ ಕಡೆ ಸ್ಥಳಾಂತರ ಮಾಡುವ ಬಗ್ಗೆ ಚಿಂತನೆ ಸಹ ನಡೆಸಲಾಗುತ್ತದೆ. ಸದ್ಯ ಕಸದ ಕಾಲುವೆಯಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವಂತಹ ಪ್ರಕರಣ ಕಂಡು ಬಂದಿಲ್ಲ. ವೈಜ್ಞಾನಿಕವಾಗಿ ಶಾಶ್ವತ ಇದಕ್ಕೆ ಪರಿಹಾರ ಮಾಡುವ ಹಾಗೆ ಯೋಜನೆ ರೂಪಿಸಲು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಉಪ‌ಲೋಕಾಯುಕ್ತ ಫಣೀಂದ್ರ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

 

ಸಮಾಜ ಸೇವಕ ಎಸ್. ಸಿದ್ದೇಶ್ ಅವರು ksrtc ಬಸ್ ನಿಲ್ದಾಣದ ಕುಂದು ಕೊರತೆಗಳನ್ನು ಉಪ ಲೋಕಾಯುಕ್ತರ ಗಮನಕ್ಕೆ ತಂದರು , ಇದಕ್ಕೆ ಸ್ಪಂದಿಸಿದ ಲೋಕಾಯುಕರು ಅಧಿಕಾರಿಗಳಿಗೆ ಸೂಕ್ತ ನಿರ್ವಹಣೆ ಮಾಡುವಂತೆ ಆಗ್ರಹಿಸಿದರು ,